Anuvada Sampada Resources
For BEd students, teachers and research scholars

Azim Premji University, in collaboration with Bengaluru North University, Bengaluru, is organising a one-day deliberation and workshop – to build awareness about ‘Anuvada Sampada’ the University’s free open access digital repository of academic resources translated from English to Indian languages.
Prof T V Kattimani, Vice Chancellor, Central Tribal University of Andhra Pradesh, Vizianagaram will launch the book ‘Bhasheya Bodhane mattu Kalike: Kelavu Munnotagalu’ published by Azim Premji University, Bengaluru in collaboration with Kannada University, Hampi. The book is a compilation of selected papers presented at a seminar conducted by Azim Premji University.
The day-long event intends to familiarise key stakeholders in education on the range of resources available on the Anuvada Sampada platform and enable them to mine, use, and reuse these materials. There is a panel discussion on “Creative language teaching practices in multilingual classrooms”.
ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಇವರ ಸಹಯೋಗದೊಂದಿಗೆ, ಇಂಗ್ಲಿಷ್‌ನಿಂದ ಭಾರತೀಯ ಭಾಷೆಗಳಿಗೆ ಅನುವಾದಿಸಲಾದ ಶೈಕ್ಷಣಿಕ ಸಂಪನ್ಮೂಲಗಳ ಉಚಿತ ಹಾಗೂ ಮುಕ್ತ ಲಭ್ಯತೆಯ ಡಿಜಿಟಲ್ ಕಣಜವಾಗಿರುವ ʻಅನುವಾದ ಸಂಪದʼದ ಕುರಿತು ಅರಿವನ್ನು ರೂಪಿಸುವುದಕ್ಕಾಗಿ ಒಂದು ದಿನದ ವಿಚಾರ ಮಂಥನ ಮತ್ತು ಕಾರ್ಯಾಗಾರವನ್ನು ಆಯೋಜಿಸಲಿದೆ.
ಪ್ರೊ. ಟಿ. ವಿ. ಕಟ್ಟಿಮನಿ, ಕುಲಪತಿಗಳು, ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯ, ಆಂಧ್ರ ಪ್ರದೇಶ, ವಿಜಯನಗರಂ ಅವರು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಹಂಪಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪ್ರಕಟಿಸಿರುವ ‘ಭಾಷೆಯ ಬೋಧನೆ ಮತ್ತು ಕಲಿಕೆ: ಕೆಲವು ಮುನ್ನೋಟಗಳು’ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಇಡೀ ದಿನ ನಡೆಯುವ ಈ ಕಾರ್ಯಕ್ರಮವು, ʻಅನುವಾದ ಸಂಪದ’ ಕಣಜದಲ್ಲಿ ದೊರೆಯುವ ವಿವಿಧ ಸಂಪನ್ಮೂಲಗಳನ್ನು ಶಿಕ್ಷಣ ಕ್ಷೇತ್ರದಲ್ಲಿರುವ ಭಾಗೀದಾರರಿಗೆ ಪರಿಚಯಿಸುವ, ಈ ಸಾಮಗ್ರಿಗಳನ್ನು ಶೋಧಿಸಿ, ಬಳಸಲು ಮತ್ತು ಮರುಬಳಕೆ ಮಾಡಲು ಅವರಿಗೆ ಸಾಧ್ಯವಾಗಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ‘ಬಹುಭಾಷಾ ತರಗತಿಗಳಲ್ಲಿ ಭಾಷಾಬೋಧನೆಯ ಸೃಜನಶೀಲ ಅಭ್ಯಾಸಗಳು’ ಎಂಬ ವಿಷಯವನ್ನು ಕುರಿತ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ.




