ಸಾಹಿತ್ಯ ಸಹವಾಸ (Sahitya Sahavasa)

ಯು.ಆರ್.ಅನಂತಮೂರ್ತಿ ಅವರ ವೀಡಿಯೋ ಉಪನ್ಯಾಸ ಮಾಲಿಕೆ ಬಿಡುಗಡೆ ಹಾಗೂ ಸಾಹಿತ್ಯ‑ಸಾಂಸ್ಕೃತಿಕ ಕಾರ್ಯಕ್ರಮ
(Launch of U R Ananthamurthy lecture series and accompanying literary and cultural event)

Image002 1

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು, ಆಗಸ್ಟ್‌ 2, 2024ರಂದು ಶಿವಮೊಗ್ಗದಲ್ಲಿ ನಡೆಯುತ್ತಿರುವ ʻಸಾಹಿತ್ಯ ಸಹವಾಸ’ — ಪ್ರೊ. ಯು. ಆರ್‌. ಅನಂತಮೂರ್ತಿ ಅವರ ವಿಡಿಯೊ ಉಪನ್ಯಾಸ ಸರಣಿ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದೆ. ಈ ಉಪನ್ಯಾಸ ಸರಣಿಯು ಇಪ್ಪತ್ತನೇ ಶತಮಾನದ ಕನ್ನಡದ ಪ್ರಮುಖ ಬರಹಗಾರರ ಕೊಡುಗೆ ಹಾಗೂ ಸಾಹಿತ್ಯಕ ಚಳುವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ.


ಕಾರ್ಯಕ್ರಮದಲ್ಲಿ, ಕನ್ನಡ ಸಾಹಿತ್ಯಕ್ಕೆ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಪಿ. ಲಂಕೇಶ್‌  ಅವರ ಕೊಡುಗೆ ಮತ್ತು ದಲಿತ ಸಾಹಿತ್ಯದ ಕುರಿತು ಭಾಷಣ, ನಾಟಕ ಪ್ರದರ್ಶನ, ಕುವೆಂಪು ಮತ್ತು ಲಂಕೇಶ್‌ರವರ ಕವಿತೆಗಳ ಗಾಯನ, ಪ್ರಮುಖ ಸಾಹಿತಿಗಳ ಛಾಯಾಚಿತ್ರ ಪ್ರದರ್ಶನ ಸೇರಿದಂತೆ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದಲ್ಲದೆ, ಕಾರ್ಯಕ್ರಮದ ಅಂಗವಾಗಿ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿಮರ್ಶಾ ಲೇಖನ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.

ಕಾರ್ಯಕ್ರಮ ವಿವರ

Azim Premji University, Bengaluru, invites you to the launch of Sahitya Sahavasa, a video lecture series by the late Prof U R Ananthamurthy and the accompanying literary and cultural event.

Programme Schedule