ಕೃಷ್ಣೆಯಿಂದ ಕಾವೇರಿಯವರೆಗೆ | Krishna to Kaveri

ಕರ್ನಾಟಕದ ಸಂಗಮಗಳನ್ನು ಸಂಭ್ರಮಿಸೋಣ | Join us to celebrate Karnataka, where cultures converge and flourish, much like the rivers that shape its identity

Media

ಕರ್ನಾಟಕವು ಹಲವು ವೈವಿಧ್ಯತೆಗಳ ನಾಡು. ಅದೇ ಅದರ ಅಸ್ಮಿತೆ. ಹಲವು ಸಂಸ್ಕೃತಿಗಳು ಮತ್ತು ಭಾಷೆಗಳೊಂದಿಗೆ ಜೀವ ಮಿಡಿಯುವ ಚಿತ್ರಚಿತ್ತಾರದ ನಮ್ಮ ವಿಶಾಲ ಕರ್ನಾಟಕದ ಸುತ್ತ ಪಯಣಿಸೋಣ ಬನ್ನಿ. ಕರ್ನಾಟಕದ ಉದ್ದಗಲಗಳಲ್ಲಿ ಅದರ ಭೂಭಾಗವನ್ನು, ಸಮುದಾಯಗಳನ್ನು ಮತ್ತು ಅನುಭವಗಳನ್ನು ತಮ್ಮ ಮಡಿಲೊಳಗಿಟ್ಟುಕೊಂಡ ಶಕ್ತಿಶಾಲಿ ನದಿಗಳಾದ ಕೃಷ್ಣೆ, ಕಾವೇರಿಯರಿಂದ  ನಮ್ಮ ಉತ್ಸವವು ಪ್ರೇರಿತವಾಗಿದೆ. ಅಂತೆಯೇ ಕೃಷ್ಣೆಯಿಂದ ಕಾವೇರಿಯವರೆಗೆ” ಎಂಬ ಈ ನಮ್ಮ ಪ್ರಸ್ತುತಿ. 

ಕೃಷ್ಣೆ ಮತ್ತು ಕಾವೇರಿಯೆಂಬ ಎರಡು ನದಿಗಳು ಈ ರಾಜ್ಯದ ವಿವಿಧ ಭೂಭಾಗಗಳ ಉದ್ದಕ್ಕೂ ಹರಿಯುತ್ತಿರುವ ಹಾಗೆಯೇ ನಮ್ಮ ಹಬ್ಬವು ಕರ್ನಾಟಕದ ವಿವಿಧ ಸಂಸ್ಕೃತಿ ಮತ್ತು ಭಾಷೆಗಳೊಂದಿಗೆ ಕೊಂಡಿಯನ್ನು ಬೆಸೆಯುವ ಆಶಯವನ್ನು ಹೊಂದಿದೆ. ಈ ಜೀವದಾಯಿನಿ ನದಿಗಳು ವಿಸ್ತೃತ ಭೂಭಾಗ, ಸಮೃದ್ಧ ವೈವಿಧ್ಯತೆ ಮತ್ತು ಸಮನ್ವಯಿತ ಸ್ವರೂಪದ ಈ ರಾಜ್ಯಕ್ಕೆ  ಒಂದು ಸಶಕ್ತ ರೂಪಕವಾಗಬಲ್ಲವು. 

ಜೀವಜಾಲಕ್ಕೆ ಹೊಸಚೈತನ್ಯವನ್ನು ನೀಡುವ ಈ ಪವಿತ್ರ ನದಿಗಳನ್ನು ಮಾದರಿಯಾಗಿಸಿಕೊಂಡು ನಾವು ನಮ್ಮ ಈ ಹಬ್ಬವನ್ನು ಮರುಹುಟ್ಟು ಹಾಗೂ ಮರುಚೈತನ್ಯವೆಂಬ ಎರಡು ಪರಿಕಲ್ಪನೆಗಳ ಸುತ್ತ ಸಂಯೋಜಿಸಿದ್ದೇವೆ. ಈ ನೆಲದ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಪದ್ಧತಿಗಳು, ಮತ್ತು ಆಚರಣೆಗಳು ಸಮಕಾಲೀನ ಸಂದರ್ಭದಲ್ಲಿ ಎಷ್ಟು ಮಹತ್ವವಾಗುತ್ತವೆ ಎನ್ನುವುದನ್ನು ತಿಳಿಯಪಡಿಸುತ್ತ ಈ ಎಲ್ಲವುಗಳಿಗೆ ಹೊಸಜೀವವನ್ನು ಕಲ್ಪಿಸುವ ಆಶಯ ನಮ್ಮದು. 

ಸಂಸ್ಕೃತಿಗಳು ಒಂದರೊಳಗೊಂದು ಬೆರೆತು ಬೆಳೆಯುವ ನೆಲ ಕರ್ನಾಟಕ. ಅದರ ಅಸ್ಮಿತೆಯನ್ನು ರೂಪಿಸುವ ನದಿಗಳ ಹಾಗೆ. ರಾಜ್ಯದ ಈ ಮೂಲಗುಣಕ್ಕೆ ಚೈತನ್ಯವನ್ನು ತುಂಬುವ ಸಂಭ್ರಮಾಚರಣೆಯಲ್ಲಿ ನೀವೂ ಜೊತೆಯಾಗಿ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ ಸಹಭಾಗಿತ್ವದಲ್ಲಿ ಈ ಹಬ್ಬವನ್ನು ಪ್ರಸ್ತುತಪಡಿಸುತ್ತಿದೆ. 

Azim Premji University, in collaboration with Bangalore International Centre, invites you to celebrate Krishna to Kaveri.

Embark on a journey through the heart of Karnataka as we explore the vibrant tapestry of cultures and languages that define this diverse state.

Our festival, Krishna to Kaveri,” is inspired by the mighty rivers that nurture Karnataka’s landscapes, communities, and experiences.

Just as the Krishna and Kaveri rivers traverse diverse geographies, our festival aims to bridge the myriad cultures and languages of Karnataka. These life-giving waters serve as a powerful metaphor for the state’s expansive terrain, rich diversity, and syncretic nature.

Inspired by the rejuvenating powers of these sacred rivers, our event curation focuses on revival and revitalization. We aim to breathe new life into traditional art forms, customs, and practices, ensuring their relevance in contemporary times.

Join us for two days of immersive experiences as we celebrate the essence of Karnataka – a land where cultures converge and flourish, much like the rivers that shape its identity.

ಕಾರ್ಯಕ್ರಮಗಳ ವಿವರ

ದಿನ -1 : ಶನಿವಾರ | Day -1 : Saturday

ಜನಪದ ಕಲಾವಿದರ ಮೆರವಣಿಗೆ ಮತ್ತು ಉದ್ಘಾಟನೆ (ನೆಲ ಅಂತಸ್ತಿನ ಪ್ರಾಂಗಣ )

Inauguration - Procession of folk artistes and launch (Ground Floor Foyer)

ಕರ್ನಾಟಕ ವೈಭವ (ನೆಲ ಅಂತಸ್ತಿನ ಪ್ರಾಂಗಣದಲ್ಲಿ) | Karnataka Vaibhava (Ground Floor Foyer)

ಆಹಾರ ಮೇಳ (ಟೆರೇಸ್‌ನಲ್ಲಿ) | Food Festival (Terrace)

ಕುಶಲಕರ್ಮಿಗಳೊಂದಿಗೆ ಮುಖಾಮುಖಿಯಾಗಿ ಅವರ ಅನುಭವಗಳನ್ನು ಕೇಳಿ ತಿಳಿಯಿರಿ (ನೆಲ ಅಂತಸ್ತಿನ ಪ್ರಾಂಗಣದಲ್ಲಿ) | Experiential Interactions with Artisans (Ground Floor Foyer)

ಸಂಗೀತ ಗಂಗಾ ಕಾವೇರಿ (ಆಡಿಟೋರಿಯಂ)

Sangeeta Ganga Kaveri (Auditorium)

ರಾಜ್ಯ ರೂಪುಗೊಂಡ ಬಗೆ ಮತ್ತು ಕರ್ನಾಟಕದ ಐತಿಹಾಸಿಕ ನೆನಪುಗಳು (ಸೆಮಿನಾರ್ ಹಾಲ್ )

United by Language (Seminar Halls)

ಡೊಳ್ಳು ಕುಣಿತ (ಲೈಬ್ರೆರಿ )

Dollu Kunitha (Library)

ಚಿತ್ತಾರ ಕಾರ್ಯಾಗಾರ (ಆಂಪಿಥಿಯೇಟರ್)

Workshop on Chittara (Amphitheatre)

ಅದ್ಭುತ ರಾಮಾಯಣ (ಆಡಿಟೋರಿಯಂ )

Adbhuta Ramayana (Auditorium)

ಕಸೂತಿ ಕಾರ್ಯಾಗಾರ (ಲೈಬ್ರೆರಿ)

Workshop on Kasuti (Library)

ಮಲೆನಾಡಿನ ಹುಲಿ ಚಿರತೆಗಳ ಜಾಡಿನಲ್ಲಿ (ಸೆಮಿನಾರ್ ಹಾಲ್ )

Malenad: Bringing Big Cats Back from the Brink (Seminar Halls)

ರಂಗಗೀತೆ (ಆಂಪಿಥಿಯೇಟರ್ )

Rangageethe (Amphitheatre)

ಇಂಡಿಯನ್‌ ಇಂಪ್ರೋವ್‌ ಟ್ರೈಬ್ (ಆಂಪಿಥಿಯೇಟರ್)

Indian Improv Tribe (Amphitheatre)

ಚಾಂಪಿಯನ್‌ಗಳ ಕೂಟ (ಸೆಮಿನಾರ್ ಹಾಲ್ )

The Champions Huddle (Seminar Halls)

ಸಂಗಮಂ ಹಬ್ಬ (ಆಡಿಟೋರಿಯಂ)

Sangamam Hubba (Auditorium)

ದಿನ - 2 : ಭಾನುವಾರ | Day - 2 : Sunday

ಕರ್ನಾಟಕ ವೈಭವ (ನೆಲ ಅಂತಸ್ತಿನ ಪ್ರಾಂಗಣದಲ್ಲಿ) | Karnataka Vaibhava (Ground Floor Foyer)

ಆಹಾರ ಮೇಳ (ಟೆರೇಸ್‌ನಲ್ಲಿ) | Food Festival (Terrace)

ಕುಶಲಕರ್ಮಿಗಳೊಂದಿಗೆ ಮುಖಾಮುಖಿಯಾಗಿ ಅವರ ಅನುಭವಗಳನ್ನು ಕೇಳಿ ತಿಳಿಯಿರಿ (ನೆಲ ಅಂತಸ್ತಿನ ಪ್ರಾಂಗಣದಲ್ಲಿ) | Experiential Interactions with Artisans (Ground Floor Foyer)

ಅಭಿಮನ್ಯು ಕಾಳಗ (ಆಡಿಟೋರಿಯಂ )

Abhimanyu at War (Auditorium)

ಬೆಳೆಯೋಣ ಬೆರೆಯೋಣ: ಹದಿಹರೆಯದವರನ್ನು ಅರ್ಥ (ಸೆಮಿನಾರ್ ಹಾಲ್ )

Growing Together: Empowering Adolescents through Understanding and Inclusivity (Seminar Halls)

ಮನೆ-ಮನೆಯ ಅಡುಗೆ ರುಚಿಯ ರಹಸ್ಯಗಳು (ಲೈಬ್ರೆರಿ)

Hidden Kitchens of Karnataka (Library)

ಪುಸ್ತಕಗಳ ಲೋಕಾರ್ಪಣೆ (ಸೆಮಿನಾರ್ ಹಾಲ್)

Book Release (Seminar Halls)

ಕಾವಂಡಿ ರಜಾಯಿ ತಯಾರಿಸುವ ಕುರಿತು ಕಾರ್ಯಾಗಾರ (ಲೈಬ್ರೆರಿ )

Workshop on Kawandi Quilt Making (Library)

ಗಾನಮಾಧುರ್ಯದ ಮೂಲ (ಆಡಿಟೋರಿಯಂ)

Melodic Roots (Auditorium)

ಕನ್ನಡ ಪ್ರಜ್ಞೆಯ ವಿಕಾಸ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತರು (ಸೆಮಿನಾರ್ ಹಾಲ್)

Evolution of Kannada Consciousness and Jnanapith Awardees (Seminar Halls)

ಪುಣ್ಯಕೋಟಿ - ಸ್ಟ್ಯಾಂಡಪ್‌ ಕಾಮೆಡಿ(ಆಂಪಿಥಿಯೇಟರ್ )

Standup Comedy - Punyakoti (Amphitheatre)

ಕಾಯಕ (ಆಡಿಟೋರಿಯಂ)

Kayaka (Auditorium)

Glimpses 

In the Media