ಯುವ ಬರಹಗಾರರಿಗಾಗಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಣ್ಣ ಕಥಾ ಸ್ಪರ್ಧೆ 2024 (Short Story Contest for Young Writers)

ಕರ್ನಾಟಕದಾದ್ಯಂತ ಇರುವ ಯುವ ಬರಹಗಾರರಿಗೆ ಇದೊಂದು ಆತ್ಮೀಯ ಕರೆ. ನಿಮ್ಮ ಅತ್ಯುತ್ತಮ ಕಥೆಯನ್ನು ನಮಗೆ ಕಳುಹಿಸಿ! ಕನ್ನಡ, ಇಂಗ್ಲಿಷ್‌ಎಲ್ಲಾ ಓಕೆ. (Kannada, English, ella okay)

Deadline extended to 10 March 2024

Writing Contest social media writing SM Kannda 2

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಇಂಗ್ಲಿಷ್‌ವಿಭಾಗವು ಯುವ ಬರಹಗಾರರಿಗಾಗಿ ಕನ್ನಡ ಮತ್ತು ಇಂಗ್ಲಿಷ್‌ಭಾಷೆಯಲ್ಲಿ ತನ್ನ ಮೊತ್ತಮೊದಲ ಸಣ್ಣ ಕಥಾ ಸ್ಪರ್ಧೆಯನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಹಂಚಿಕೊಳ್ಳಲು ಉತ್ಸುಕವಾಗಿದೆ.

ಪ್ರತಿ ವರ್ಷವೂ, ಈ ಸ್ಪರ್ಧೆಯು ಒಂದು ವ್ಯಾಪಕ ವಿಷಯದ ಮೇಲೆ ನಡೆಯಲಿದ್ದು, ಇದರ ಸುತ್ತಲೂ ತಮ್ಮ ಕಥೆಗಳನ್ನು ಹೆಣೆಯಲು ಬರಹಗಾರರನ್ನು ಆಹ್ವಾನಿಸಲಾಗುತ್ತದೆ. ಇದು ಕಾಲ್ಪನಿಕ ಅಥವಾ ಕಾಲ್ಪನಿಕವಲ್ಲದ ಕಥೆಯಾಗಿರಬಹುದು.

ಮೊದಲ ವರ್ಷದಲ್ಲಿ ಈ ಬರವಣಿಗೆ ಸ್ಪರ್ಧೆಗೆ ಎರಡು ಬಹುಮಾನಗಳಿದ್ದು, ಮೊದಲನೆಯದು ಇಂಗ್ಲಿಷ್‌ನ ಕಾಲ್ಪನಿಕ ಕಥೆಗಾಗಿ ಇದ್ದು, ಎರಡನೆಯ ಬಹುಮಾನವನ್ನು ಕನ್ನಡಕ್ಕಾಗಿ ಮೀಸಲಿಡಲಾಗಿದೆ. ಸಾಹಿತ್ಯ ಪ್ರಪಂಚವನ್ನು ಪ್ರವೇಶಿಸುವುದು ಅನೇಕ ಬರಹಗಾರರ ಪಾಲಿಗೆ ಸವಾಲಿನ ಕೆಲಸವಾಗಿದೆ. ಹೀಗಾಗಿ ಇಲ್ಲಿಯತನಕ ಎಲ್ಲಿಯೂ ತಮ್ಮ ಕಥೆಯ ಪ್ರಕಟಣೆಗೆ ಅವಕಾಶವನ್ನು ಪಡೆಯದ ಕರ್ನಾಟಕದ ಯುವ ಬರಹಗಾರರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ನಾವು ಉತ್ತೇಜಿಸುತ್ತೇವೆ.

ವಿಷಯ

ಈ ವರ್ಷದ ವಿಷಯ ʻಮಾದರಿ ಬಡಾವಣೆ ಅಥವಾ Model Homes Layout ಆಗಿದೆ.

ಈ ವಿಷಯವನ್ನು ಯಾವುದೇ ರೀತಿಯಲ್ಲಿ ಅರ್ಥೈಸಿಕೊಂಡು ಕಥೆ ಹೆಣೆಯಲು ನೀವು ಮುಕ್ತರಾಗಿದ್ದೀರಿ. ಯಾವುದೇ ಪ್ರಕಾರ ಮತ್ತು ಶೈಲಿಯ ಕಥೆಗಳಿಗೆ ಸ್ವಾಗತ.

ಭಾಷೆ

  1. ಕಥೆಯು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿರಬಹುದು. 
  2. ಕನ್ನಡ ಭಾಷೆಯು ಪ್ರಾದೇಶಿಕ ಸೊಗಡು, ಉಪಭಾಷೆಗಳ ವಿಶಿಷ್ಟ ಪ್ರಯೋಗಗಳಿಂದ ಸಮೃದ್ಧವಾಗಿದ್ದು, ಇಂಥ ಭಾಷಿಕ ಪ್ರಯೋಗಗಳನ್ನು ಕಥೆಗಳಲ್ಲಿ ಹೇರಳವಾಗಿ ಬಳಸಬಹುದಾಗಿದೆ. 

ಯಾರು ಸ್ಪರ್ಧಿಸಬಹುದು?

ಹದಿನಾರು ಮತ್ತು ಇಪ್ಪತ್ತೈದು* ವರ್ಷ ವಯಸ್ಸಿನ ನಡುವಿನ ಕರ್ನಾಟಕದ ಯಾವುದೇ ನಿವಾಸಿ (ಈಗ ನೆಲೆಸಿರುವ ಅಥವಾ ಮೊದಲು ನೆಲೆಸಿದ್ದಿರಬಹುದು).

ನೀವು ಏನನ್ನು ಬರೆಯಬಹುದು? 

ಏನು ಬೇಕಾದರೂ ಬರೆಯಬಹುದು, ಎಲ್ಲವನ್ನೂ ಬರೆಯಬಹುದು, ಆದರೆ ಇದು ಸಣ್ಣಕಥೆಯಾಗಿದ್ದು (1500 ರಿಂದ 3000 ಪದಗಳೊಳಗಿದ್ದು) ಕಾಲ್ಪನಿಕವಾಗಿರಬೇಕು. ಪ್ರಕಾರ ಮತ್ತು ಭಾಷೆಯಲ್ಲಿ ಪ್ರಯೋಗಗಳಿಗೆ ಮುಕ್ತ ಸ್ವಾಗತವಿದೆ!

ತಜ್ಞ ತೀರ್ಪುದಾರರ ಸಮಿತಿ

ಬೋಧಕ ಸಿಬ್ಬಂದಿ, ಪ್ರಕಟಣೆಯನ್ನು ಕಂಡಿರುವ ಲೇಖಕರು ಮತ್ತು ಸಾಹಿತ್ಯ ಕ್ಷೇತ್ರದ ತಜ್ಞರ ಸಮಿತಿಯು ಸೃಜನಶೀಲತೆ, ಸ್ವಂತಿಕೆ, ಸುಸಂಬದ್ಧತೆ ಮತ್ತು ಒಟ್ಟಾರೆ ಪರಿಣಾಮವನ್ನು ಆಧರಿಸಿ ಸಲ್ಲಿಸಲಾದ ಕಥೆಗಳ ಮೌಲ್ಯಮಾಪನ ನಡೆಸಲಿದೆ.

ಬಹುಮಾನಗಳು

ಇಬ್ಬರು ವಿಜೇತರು (ಕನ್ನಡ ಮತ್ತು ಇಂಗ್ಲಿಷ್)‌ಪ್ರಶಂಸಾ ಪತ್ರದ ಜೊತೆಗೆ ತಲಾ ರೂ. 5000 ದಷ್ಟು ಮೊತ್ತದ ಪುಸ್ತಕ ಖರೀದಿಗಾಗಿ ಕೂಪನ್‌ಗಳನ್ನು ಪಡೆಯಲಿದ್ದಾರೆ; ನಾಲ್ವರು ರನ್ನರ್‌ಅಪ್‌ಗಳು (ಪ್ರತಿ ಭಾಷೆಯಿಂದ ತಲಾ ಇಬ್ಬರು) ತಲಾ ರೂ. 2500 ದಷ್ಟು ಮೊತ್ತದ ಪುಸ್ತಕ ಖರೀದಿಗಾಗಿ ಕೂಪನ್‌ಗಳನ್ನು ಪಡೆಯಲಿದ್ದಾರೆ.

ಬಹುಮಾನಗಳನ್ನು ಮಾರ್ಚ್‌ತಿಂಗಳ ಮಧ್ಯದಲ್ಲಿ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು.

ನಾನು ಹೇಗೆ ಭಾಗವಹಿಸಬಹುದು?

ಈ ಕೆಳಗಿನ ಲಿಂಕ್‌ಅನ್ನು ಕ್ಲಿಕ್‌ಮಾಡುವ ಮೂಲಕ ನಿಮ್ಮ ಕಥೆಗಳನ್ನು ಸಲ್ಲಿಸಿ. 

ಈಗ ಸಲ್ಲಿಸಿ

ಕಥೆಯನ್ನು ಸಲ್ಲಿಸಲು ಕೊನೆಯ ದಿನಾಂಕ: 10 March 2024

ನಿಮ್ಮಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ writing.​contest@​apu.​edu.​in

* ಅಂತಿಮ ಸುತ್ತಿಗೆ ಆಯ್ಕೆಯಾದ ಲೇಖಕರ ವಯಸ್ಸು ಮತ್ತು ನಿವಾಸವನ್ನು ದೃಢೀಕರಿಸುವುದಕ್ಕಾಗಿ ಶಾಲೆಯ, ಕಾಲೇಜಿನ ಅಥವಾ ಇತರ ಗುರುತು ಪತ್ರವನ್ನು ಸಲ್ಲಿಸಲು ಕೇಳಲಾಗುವುದು.