The Women Who Built Bengaluru’s Food Story | ಕರ್ನಾಟಕದ ಮಹಿಳಾ ಆಹಾರೋದ್ಯಮಿಗಳು

What connects a woman selling food door-to-door in 1947, a pioneering coffee exporter from a century ago, and one of Bengaluru’s most talked-about restaurants today?

In this Women’s Month special episode of Noorakke Nooru Karnataka, we trace the journeys of women who shaped Karnataka’s food culture across generations.

NNK Food Website Banner 02 jpg

Bengaluru food storyteller Eat Raja brings back stories of the city’s lost food places with Subbammana Angadi, started in 1947 by a single mother from Hindupura who had to raise three children on her own. She began by cooking at home and selling food door to door. Over time, that small effort grew into one of Bengaluru’s beloved food institutions.

We then travel further back to Coffee Pudi Sakamma, born in 1880, who came to Bengaluru in the early 20th century and set up a coffee curing and processing plant in Basavanagudi. She went on to become the first woman to export coffee from India to the United Kingdom, and work earned her the Kaisar-e-Hind medal from the British government. The neighbourhood around Yediyuru lake, Sakkamma Garden still carries the memory of that enterprise. 

Subscribe on YouTube

Representing the present-day food scene in Bengaluru is Divya Prabhakar, founder of Bengaluru Oota Company. Inspired by handwritten recipe diaries left by her grandfather, she set out to recreate the Karnataka dishes she grew up eating at home and share them with the world.

Across nearly a century of stories, one thread connects them all: women who quietly built the food culture we enjoy today.

1947 ರಲ್ಲಿ ಮನೆ ಮನೆಗೆ ತಿಂಡಿ ಮಾರಾಟ ಮಾಡುತ್ತಿದ್ದ ಒಬ್ಬ ಮಹಿಳೆ, ಒಂದು ಶತಮಾನದ ಹಿಂದೆ ಅಂತಾರಾಷ್ಟ್ರೀಯ ಕಾಫಿ ರಫ್ತುದಾರಳಾಗಿದ್ದ ಮತ್ತೋರ್ವಳು ಮತ್ತು ಇಂದು ಬೆಂಗಳೂರಿನ ಅತ್ಯಂತ ಚರ್ಚಿತ ರೆಸ್ಟೋರೆಂಟ್ಗಳಲ್ಲಿ ಒಂದು —  ಇವಕ್ಕೆಲ್ಲಾ ಏನು ಸಂಬಂಧ?

ನೂರಕ್ಕೆ ನೂರು ಕರ್ನಾಟಕದ ಈ ಮಹಿಳಾ ಮಾಸದ ವಿಶೇಷ ಸಂಚಿಕೆಯಲ್ಲಿ, ಕರ್ನಾಟಕದ ಆಹಾರ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ರೂಪಿಸಿದ ಮಹಿಳೆಯರ ಕಥೆಗಳನ್ನು ನಾವು ಅರಿಯುತ್ತೇವೆ. 

ಬೆಂಗಳೂರಿನ ಆಹಾರ ಕಥೆಗಾರ ಈಟ್ ರಾಜ, ನಗರದ ಕಳೆದುಹೋದ ಆಹಾರ ಸ್ಥಳಗಳ ಕಥೆಗಳನ್ನು ಮರಳಿ ತರುತ್ತಾರೆ. ಸುಬ್ಬಮ್ಮನ ಅಂಗಡಿ —  1947 ರಲ್ಲಿ ಹಿಂದೂಪುರದ ಒಂಟಿ ತಾಯಿಯೊಬ್ಬಳು  ಮೂರು ಮಕ್ಕಳನ್ನು ಸ್ವಂತವಾಗಿ ಬೆಳೆಸಬೇಕಾಗಿ ಬಂದಾಗ ಶುರುವಾದ್ದದ್ದಿದು. ಮನೆಯಲ್ಲಿ ತಿಂಡಿ-ತಿನಿಸು  ಮಾಡುವ ಮೂಲಕ ಮತ್ತು ಮನೆ ಬಾಗಿಲಿಗೆ ಅದನ್ನು ಮಾರಾಟ ಮಾಡುವ ಮೂಲಕ ಪ್ರಾರಂಭಿಸಿ, ಕಾಲಾನಂತರದಲ್ಲಿ, ಆ ಸಣ್ಣ ಪ್ರಯತ್ನವು ಬೆಂಗಳೂರಿನ ಪ್ರೀತಿಯ ಆಹಾರ ಸಂಸ್ಥೆಗಳಲ್ಲಿ ಒಂದಾಗಿ ಬೆಳೆಯಿತು.

ನಂತರ ನಾವು 1880 ರಲ್ಲಿ ಜನಿಸಿದ ಕಾಫಿ ಪುಡಿ ಸಾಕಮ್ಮ ಅವರ ಕಥೆಗೆ ತೆರಳುತ್ತೇವೆ.  20 ನೇ ಶತಮಾನದ ಆರಂಭದಲ್ಲಿ ಬೆಂಗಳೂರಿಗೆ ಬಂದು, ಬಸವನಗುಡಿಯಲ್ಲಿ ಕಾಫಿ ಕ್ಯೂರಿಂಗ್ ಮತ್ತು ಸಂಸ್ಕರಣಾ ಘಟಕವನ್ನು ಸ್ಥಾಪಿಸಿದ್ದಲ್ಲದೆ, ಭಾರತದಿಂದ ಯುನೈಟೆಡ್ ಕಿಂಗ್ಡಮ್ಗೆ ಕಾಫಿಯನ್ನು ರಫ್ತು ಮಾಡಿದ ಮೊದಲ ಮಹಿಳೆಯಾದರು. ಅವರ ಕೆಲಸವು ಅವರಿಗೆ ಬ್ರಿಟಿಷ್ ಸರ್ಕಾರದ ಕೈಸರ್-ಎ‑ಹಿಂದ್ ಪದಕವನ್ನು ತಂದುಕೊಟ್ಟಿತು. ಯಡಿಯೂರು ಕೆರೆಯ ನೆರೆಹೊರೆಯ ಸಾಕಮ್ಮ ಗಾರ್ಡನ್ ಇನ್ನೂ ಆ ಉದ್ಯಮದ ಸ್ಮರಣೆಯನ್ನು ಹೊಂದಿದೆ. 

ಬೆಂಗಳೂರಿನ ಇಂದಿನ ಆಹಾರ ಕ್ಷೇತ್ರದ ಪ್ರತಿನಿಧಿ ದಿವ್ಯಾ ಪ್ರಭಾಕರ್, ಬೆಂಗಳೂರು ಊಟ ಕಂಪನಿಯ ಸಂಸ್ಥಾಪಕಿ. ತನ್ನ ಅಜ್ಜ ಬಿಟ್ಟುಹೋದ ಕೈಬರಹದ ಪಾಕವಿಧಾನ ಡೈರಿಗಳಿಂದ ಪ್ರೇರಿತರಾಗಿ, ತಾನು ಮನೆಯಲ್ಲಿ ತಿಂದು ಬೆಳೆದ ಕರ್ನಾಟಕದ ಭಕ್ಷ್ಯಗಳನ್ನು ಮರುಸೃಷ್ಟಿಸಲು ಮತ್ತು ಅವುಗಳನ್ನು ಪ್ರಪಂಚದೊಂದಿಗೆ ಹಂಚಿಕೊಳ್ಳಲು ಹೊರಟವರು.

ಸುಮಾರು ಒಂದು ಶತಮಾನದ ಕಥೆಗಳಲ್ಲಿ, ಒಂದು ಸೂತ್ರ ಎಲ್ಲವನ್ನೂ  ಹಿಡಿದಿಡುತ್ತದೆ — ಇಂದು ನಾವು ಆನಂದಿಸುವ ಆಹಾರ ಸಂಸ್ಕೃತಿಯನ್ನು ಸದ್ದಿಲ್ಲದೆ ನಿರ್ಮಿಸಿದ ಮಹಿಳೆಯರು.

Credits

Akshay Ramuhalli, Bruce Lee Mani, Gorveck Thokchom, Kishor Mandal, Kruthika Rao, Narayan Krishnaswamy, Prashant Vasudevan, Ram Sheshadri, Sananda Dasgupta, Sanoob Puliyanchali, Shilpi, Tanvi Avlur, and Velu Shankar.