ಕಥಾವನ

ಮಕ್ಕಳ ಸಾಹಿತ್ಯವನ್ನು ಪುನರುಜ್ಜೀವನಗೊಳಿಸುವ ಸುದೀರ್ಘ ಮತ್ತು ರೋಮಾಂಚಕಾರಿ ಸಾಮೂಹಿಕ ಪ್ರಯಾಣದ ಹಾದಿಯತ್ತ.

ಕಥಾವನ’ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 2012ರಿಂದ ಆಯೋಜಿಸುತ್ತಿರುವ ಮಕ್ಕಳ ವಾರ್ಷಿಕ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಸಾಹಿತ್ಯೋತ್ಸವಾಗಿದ್ದು ಇದರಲ್ಲಿ ಅಜೀಂ ಪ್ರೇಮ್ ಫೌಂಡೇಷನ್ ನ ಜಿಲ್ಲಾ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸುತ್ತಿವೆ. ಮಕ್ಕಳ ಸಾಹಿತ್ಯವು ಮೌಖಿಕ, ಪ್ರದರ್ಶಕ ಮತ್ತು ಲಿಖಿತ ಸ್ವರೂಪದ್ದಾಗಿದ್ದು ಮಕ್ಕಳನ್ನು ಸಂತಸ ಭಾವ, ಕಲ್ಪನೆ, ಭಾವನೆಗಳು, ಸೃಜನಶೀಲತೆ, ಕುತೂಹಲ, ವಿವಿಧ ಸಂಸ್ಕೃತಿಗಳು, ಭಾಷೆಗಳೊಂದಿಗೆ ಒಡನಾಟ, ಮಾನವ ಬದುಕಿನ ಕುರಿತು ಅನುಭೂತಿ ಮತ್ತು ತನ್ನನ್ನೇ ಅರ್ಥ ಮಾಡಿಕೊಳ್ಳಬಹುದಾದ ಪ್ರಪಂಚಕ್ಕೆ ಸ್ವಾಗತಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಹಿನ್ನೆಲೆಯಲ್ಲಿ, ಕಥಾವನದ ಆಶಯವನ್ನು ಬಿಂಬಿಸುವ ಕೆಲವು ಪ್ರಮುಖ ಪ್ರಶ್ನೆಗಳು:

● ಎಳೆಯ ಮಕ್ಕಳನ್ನು ಅರ್ಥಪೂರ್ಣ ರೀತಿಯಲ್ಲಿ ಸಾಹಿತ್ಯಕ್ಕೆ ಪರಿಚಯಿಸಬಹುದೇ?

● ಸಾಹಿತ್ಯದ ಸಾಮರ್ಥ್ಯ ಮತ್ತು ಪ್ರಸ್ತುತತೆಯನ್ನು ತಮ್ಮ ಎಳೆಯ ವಿದ್ಯಾರ್ಥಿಗಳ ಸಂದರ್ಭಕ್ಕೆ ಅನ್ವಯಿಸುವಂತಾಗಲು ಶಿಕ್ಷಕರಿಗೆ ಸಾಹಿತ್ಯವನ್ನು ಪರಿಚಯಿಸಬಹುದೇ (ಮತ್ತು ಈ ಕುರಿತು ಮನವರಿಕೆ ಮಾಡಬಹುದೇ)?

● ಸರ್ಕಾರಿ ಶಾಲೆಗಳ ಸನ್ನಿವೇಶದಲ್ಲಿ ಇದನ್ನು ಸಾಧಿಸಬಹುದೇ?

● ಶಾಲಾ ಸಂದರ್ಭದಲ್ಲಿ ಶಿಕ್ಷಕರ ಸಾಹಿತ್ಯದ ಬಳಕೆಗೆ ನೆರವು ಒದಗಿಸುವುದಕ್ಕಾಗಿ ನಾವು ಉಪಯುಕ್ತ ಸಾಮಗ್ರಿಗಳಾದ ಮಕ್ಕಳ ಪುಸ್ತಕಗಳು, ಶಿಕ್ಷಕರ ಸಂಪನ್ಮೂಲಗಳನ್ನು ಸಿದ್ಧಪಡಿಸಬಹುದೇ?

ಈ ಪ್ರಶ್ನೆಗಳನ್ನು ಆಧರಿಸಿ ಕಥಾವನದ ಪ್ರತಿ ಆವೃತ್ತಿಯೂ ವಿವಿಧ ವೇದಿಕೆಗಳನ್ನು ಒದಗಿಸುತ್ತಿದ್ದು, ಪುಸ್ತಕ ಪ್ರದರ್ಶನಗಳು, ಕಥಾವಾಚನ ಮತ್ತು ಗಟ್ಟಿಯಾಗಿ ಓದುವ ಕಾರ್ಯಕ್ರಮಗಳು, ಗೊಂಬೆಯಾಟ, ಲೇಖಕರೊಂದಿಗೆ ಸಂವಾದ ಮತ್ತು ಸಚಿತ್ರ ವಿವರಣೆ ಕಾರ್ಯಕ್ರಮಗಳು, ಶಿಕ್ಷಕರಿಗಾಗಿ ವೃತ್ತಿಪರ ಅಭಿವೃದ್ಧಿ ಕಾರ್ಯಾಗಾರಗಳು, ಹಾಗೂ ಸಂಬಂಧಪಟ್ಟ ವಿವಿಧ ಆಸಕ್ತರು ಒಂದೇ ಸೂರಿನಡಿ ಒಗ್ಗೂಡಿ ಸಾಹಿತ್ಯಕ್ಕೆ ಸಂಬಂಧಿಸಿದ ಸಮಂಜಸ ವಿಚಾರಗಳನ್ನು ಚರ್ಚಿಸುವುದಕ್ಕಾಗಿ ವೇದಿಕೆಗಳು — ಇತ್ಯಾದಿಗಳ ಮೂಲಕ ಮಕ್ಕಳು, ಶಿಕ್ಷಕರು ಮತ್ತು ಸಮುದಾಯದ ಸದಸ್ಯರು ಸಾಹಿತ್ಯದೊಂದಿಗೆ ಆಳವಾಗಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ನೀಡಲಾಗುತ್ತದೆ. ಕಥಾವನದ ಪ್ರತಿ ಆವೃತ್ತಿಯು ಒಂದು ವಿಷಯವಸ್ತುವನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಗಹನವಾಗಿ ಶೋಧಿಸುತ್ತದೆ.

ಕಥಾವನ 2022 – 2023 ರ ವಿಷಯವಸ್ತು: ಸಾಹಿತ್ಯದೆಡೆಗೆ ಮಕ್ಕಳ ಪ್ರತಿಸ್ಪಂದನೆ

  • WP 20140912 022
  • WP 20140912 004
  • Whats App Image 2022 11 10 at 12 27 43 PM 1
  • Kathavana_3
  • Whats App Image 2022 11 10 at 12 27 36 PM
  • Whats App Image 2022 11 10 at 12 27 42 PM
  • Kathavana _Banner
  • KathaVana_1
  • Whats App Image 2022 05 20 at 1 08 36 PM

ಕಥಾವನದ ಹಿಂದಿನ ಸಂಚಿಕೆ ಮತ್ತು ವಿಷಯಗಳು: 

  • ಕಥಾವನ 2021: ಬೇವು-ಬೆಲ್ಲ: ಕೋವಿಡ್-19 ಸಾಂಕ್ರಾಮಿಕ ಕಾಲದ ಕಥೆಗಳು
  • ಕಥಾವನ 2020: ಮೂಲಸಾಕ್ಷರತೆಯನ್ನು ಉತ್ತೇಜಿಸುವ ಗ್ರಂಥಾಲಯಗಳು
  • ಕಥಾವನ 2019: ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಪುನರುಜ್ಜೀವನ 
  • ಕಥಾವನ 2018: ಬರಹಗಾರರಾಗಿ ಶಿಕ್ಷಕರು
  • ಕಥಾವನ 2017: ಮಕ್ಕಳಿಗಾಗಿ ಬರವಣಿಗೆಯನ್ನು ಅರ್ಥೈಸಿಕೊಳ್ಳುವುದು
  • ಕಥಾವನ 2016: ಓದುಗರಿಗಾಗಿ ಅವಕಾಶ ನಿರ್ಮಿಸುವುದು
  • ಕಥಾವನ 2015: ಓದುಗರಾಗಿ ಶಿಕ್ಷಕರು
  • ಕಥಾವನ 2014: ಸಾಹಿತ್ಯದಲ್ಲಿ ಮಕ್ಕಳ ಧ್ವನಿಗಳು
  • ಕಥಾವನ 2013
  • ಕಥಾವನ 2012