Azim Premji University to host lecture series on U R Ananthamurthy in Udupi on June 1

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವತಿಯಿಂದ ಜೂನ್ 1 ರಂದು ಉಡುಪಿಯಲ್ಲಿ ಸಾಹಿತ್ಯ ಸಹವಾಸ’ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ | ಬೆಂಗಳೂರು, ಮೇ 29 – ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಜೂನ್‌1ರಂದು ಉಡುಪಿಯಲ್ಲಿ ಸಾಹಿತ್ಯ ಸಹವಾಸ’ ಕಾರ್ಯಕ್ರಮ ಸರಣಿಗೆ ಚಾಲನೆ ನೀಡುತ್ತಿದೆ. ಇದು ರಾಜ್ಯದ ಸಾಂಸ್ಕೃತಿಕ ಪರಂಪರೆ, ಕನ್ನಡದ ಪ್ರಮುಖ ಸಾಹಿತಿಗಳು, ಮತ್ತು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಸಂಭ್ರಮಿಸಲು ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ಎರಡನೆಯದಾಗಿದೆ. 

ಉಡುಪಿಯ ಕಾರ್ಯಕ್ರಮವನ್ನು ಕನ್ನಡದ ಹೆಸರಾಂತ ಸಾಹಿತಿಗಳಾದ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ ಮತ್ತು ನವ್ಯ ಸಾಹಿತ್ಯ ಚಳುವಳಿ — ಇವುಗಳನ್ನು ಕುರಿತು ಅನಂತಮೂರ್ತಿಯವರು ನೀಡಿರುವ ಮೂರು ಉಪನ್ಯಾಸಗಳ ಸುತ್ತ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ಅನಂತಮೂರ್ತಿಯವರ ವಿದ್ವತ್ಪೂರ್ಣ ಉಪನ್ಯಾಸಗಳನ್ನು ವಿಶ್ವದೆಲ್ಲೆಡೆ ಇರುವ ಆಸಕ್ತರಿಗೆ ದೊರೆಯುವಂತೆ ಮಾಡಲು, ಇಂಗ್ಲಿಷ್‌ಉಪಶೀರ್ಷಿಕೆಗಳೊಂದಿಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯೂಟ್ಯೂಬ್ ವಾಹಿನಿಯ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಈ ಉಪನ್ಯಾಸ ಸರಣಿಯು ಹಿಂದೆ ಬೆಂಗಳೂರು ದೂರದರ್ಶನ ಕೇಂದ್ರದಿಂದ ಪ್ರಸಾರವಾಗಿತ್ತು. 

ಈ ಉಪನ್ಯಾಸ ಸರಣಿಯು ಇಪ್ಪತ್ತನೇ ಶತಮಾನದ ಕನ್ನಡದ ಪ್ರಮುಖ ಬರಹಗಾರರಾದ ಕುವೆಂಪು, ದ. ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್‌, ಪಿ. ಲಂಕೇಶ್‌, ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಎ.ಕೆ. ರಾಮಾನುಜನ್‌ಮತ್ತು ಗಿರೀಶ್‌ಕಾರ್ನಾಡ್‌ಅವರ ಕೊಡುಗೆಗಳು ಹಾಗೂ ದಲಿತ ಮುಂತಾದ ಪ್ರಮುಖ ಸಾಹಿತ್ಯಕ ಚಳುವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ. 

ಕನ್ನಡದ ಪ್ರಮುಖ ಸಾಹಿತಿ ಮತ್ತು ಚಿಂತಕರಾದ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರು ಕಾರಂತ ಮತ್ತು ಅಡಿಗರ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಈ ವಿಡಿಯೊ ಸರಣಿಯನ್ನು ಬಿಡುಗಡೆ ಮಾಡಲಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಶರತ್‌ಅನಂತಮೂರ್ತಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. 

ಅಂದಿನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಕಾರಂತ ಮತ್ತು ಅಡಿಗರ ಕೊಡುಗೆಯ ಬಗ್ಗೆ ವಿದ್ವತ್‌ಗೋಷ್ಠಿ ಮತ್ತು ಭಾಷಣ, ಯಕ್ಷಗಾನ ಪ್ರದರ್ಶನ, ಅಡಿಗರ ಗೀತೆಗಳ ಗಾಯನ, ಪ್ರಮುಖ ಸಾಹಿತಿಗಳ ಚಿತ್ರಾವಳಿ ಪ್ರದರ್ಶನ ಸೇರಿದಂತೆ ಹಲವು ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ಸಾಹಿತಿಗಳು ಮತ್ತು ಸಂಸ್ಕೃತಿ ಚಿಂತಕರು ಭಾಗವಹಿಸಲಿದ್ದಾರೆ. ಇದಲ್ಲದೆ, ಪದವಿ ಮತ್ತು ಪದವಿ-ಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಮತ್ತು ಭಾವಗೀತೆ ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು. 

ಬೆಂಗಳೂರಿನಲ್ಲಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು, ಮಕ್ಕಳಿಗಾಗಿ ವಾರ್ಷಿಕ ಸಾಹಿತ್ಯೋತ್ಸವ ಕಥಾವನ’, ಎಲ್ಲರ ಲಭ್ಯತೆಗಾಗಿ ಗುಣಮಟ್ಟದ ಶೈಕ್ಷಣಿಕ ಸಂಪನ್ಮೂಲಗಳನ್ನೊಳಗೊಂಡ ಮುಕ್ತ ಆನ್ಲೈನ್ ಕಣಜ ಅನುವಾದ ಸಂಪದ’, ರೇಡಿಯೊ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ವತಿಯಿಂದ ಕರ್ನಾಟಕದ ಏಳ್ಗೆಯಲ್ಲಿ ಮಹತ್ತರ ಪಾತ್ರ ವಹಿಸಿರುವ ವಿದ್ಯಮಾನ, ಸ್ಥಳ ಮತ್ತು ವ್ಯಕ್ತಿಗಳನ್ನು ಮುನ್ನೆಲೆಗೆ ತರುವ ನೂರಕ್ಕೆ ನೂರು ಕರ್ನಾಟಕ’ ಕಾರ್ಯಕ್ರಮದ ಪ್ರಸಾರ, ಮುಂತಾದ ಕನ್ನಡ ಉಪಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕರ್ನಾಟಕದ ಸಾಂಸ್ಕೃತಿಕ ರಂಗಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಹೆಚ್ಚಿನ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದು, ಸರಣಿ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜ್ಯದ ವಿವಿಧ ಭಾಗಗಳಲ್ಲಿ ಆಯೋಜಿಸಲು ಉದ್ದೇಶಿಸಿದೆ. 

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಕುರಿತು: 

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯವನ್ನು ಕರ್ನಾಟಕ ಸರಕಾರದ 2010ರ ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯ ಕಾಯಿದೆಯಡಿಯಲ್ಲಿ ಸ್ಥಾಪಿಸಲಾಗಿದೆ. ಅಜೀಂ ಪ್ರೇಮ್‍ಜಿ ಫೌಂಡೇಷನ್ ಸ್ಥಾಪಿಸಿರುವ ಈ ವಿಶ್ವವಿದ್ಯಾಲಯವು ಸಂಪೂರ್ಣವಾಗಿ ಸಮಾಜೋಪಕಾರಿ ಉದ್ದೇಶವನ್ನು ಹೊಂದಿದ್ದು, ಲಾಭರಹಿತ ಸಂಸ್ಥೆಯಾಗಿದೆ. ವಿಶ್ವವಿದ್ಯಾಲಯವು ಸ್ಪಷ್ಟವಾದ ಸಾಮಾಜಿಕ ಗುರಿಯನ್ನು ಹೊಂದಿದ್ದು ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ರಶ್ಮಿ ಪ್ರಭಾಕರ್ ಮೊಬೈಲ್‌: +91 9481934254
Rashmi.​prabhakar@​k2communications.​in

Azim Premji University is launching Sahitya Sahavasa’ — the second edition in a series of events to celebrate Karnataka’s rich cultural milieu, its literary icons, and the Kannada language — in Udupi on June 1.

The Udupi event, conceived around Prof. U R Ananthamurthy’s lectures on stalwarts of Kannada literature, Shivarama Karanth, Gopalakrishna Adiga and Navya Sahitya (the modernist phase in Kannada literature), will unveil a series of talks delivered by the Jnanpith award winner on Youtube with English subtitles to make it accessible for language enthusiasts globally. The lectures were initially telecast on Doordarshan.

The Ananthamurthy lecture series also throws light on the contributions of prominent Kannada writers of the 20th century like Kuvempu, Da Ra Bendre, Masti Venkatesha Iyengar, P Lankesh, Poornachandra Tejaswi, Chandrashekhara Kambara, A K Ramanujan and Girish Karnad and reflects upon Kannada language and key literary movements like Navya and Dalit Sahitya.

Lakshmisha Tolpadi, a prominent Kannada writer and thinker, will launch the video talks in the presence of the family members of Karanth and Adiga. Prof Sharat Ananthamurthy, Vice Chancellor, Kuvempu University, will preside over the inaugural ceremony.

The day-long programme will feature a panel discussion and talks on the contributions of Karanth and Adiga, a Yakshagana performance, rendition of Adiga’s songs, an exhibition of portraits/​artworks and anecdotes about Karanth and Adiga by their close associates. Separately, prizes will be awarded to the winners of the essay and singing competitions organised as part of the event for degree and pre- university students.

Azim Premji University, Bengaluru, organises several Kannada initiatives. These include Kathavana’, an annual children’s literary festival, the online translations repository Anuvada Sampada’, and programmes such as Noorakke Nooru Karnataka’ on Radio Azim Premji University that highlight events, places and persons who occupy a pride of place in the state’s history. The University intends to contribute more to Karnataka’s cultural landscape under Sahitya Sahavasa.’

For media queries, contact Rashmi Prabhakar (Rashmi.​prabhakar@​k2communications.​in, Cell: +91 9481934254)

Glimpses from the event