Water, Wells, Tanks and Rivers: A People’s Engagement

Inviting the local community to enjoy an evening with interesting ideas and stimulating engagements.

Water wells tanks and rivers 23 Mar 2024

About the Talk

S Vishwanath aka Zenrainman will be accompanied by Shankar and Ramakrishna who are traditional well-diggers, and they will talk about how to save every drop of water.

Currently, water is the hottest topic of worry around us in Bengaluru. Almost everyone around is facing some problem or has an opinion about water. Most homes and apartments do not have Rain Water Harvesting (RWH). There are not many community wells in the villages and they are also not maintained adequately. 

We aim to start a conversation around water and how people can start thinking of water conservation differently, given the immediate and future crisis that is on our hands. 

With extensive experience in water conservation and also having worked closely with the well restoration community, Vishwanath will share his experience. 

The talk will be a mix of Kannada and English as we focus on members from the villages and those living in apartments. 

About The Weekend at Azim Premji University

It is a new initiative to make our University campus a vibrant space for diverse events organised for the local community in Sarjapur as well as other neighbouring areas. We intend to make this a platform for the local community to enjoy an evening with interesting ideas and stimulating engagements.

For more information, contact us at weekend.​events@​apu.​edu.​in

Note: Please remember to bring a photo ID (AADHAR/ Voter ID Card/​PAN Card) for identification purposes while visiting the University campus for the event. 

ನೀರು, ನೀರಿನ ಮೂಲಗಳಾದ ಬಾವಿಗಳು, ಕೆರೆಗಳು ಹಾಗು ನದಿಗಳು ಮತ್ತು ಜನರ ಪಾಲ್ಗೊಳ್ಳುವಿಕೆ

ಸ್ಥಳೀಯ ಸಮುದಾಯವನ್ನು ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಎಲ್ಲರಲ್ಲೂ ಉತ್ಸಾಹ ತುಂಬಬಲ್ಲ ಕಾರ್ಯಗಳನ್ನು ಕೈಗೊಳ್ಳಲು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸುತ್ತಿದ್ದೇವೆ. 

ಗುರುದತ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬುರುಗುಂಟೆ ಗ್ರಾಮ, ಸರ್ವೆ ಸಂಖ್ಯೆ 66, ಬಿಕ್ಕನಹಳ್ಳಿ ಮುಖ್ಯ ರಸ್ತೆ, ಸರ್ಜಾಪುರ, ಬೆಂಗಳೂರು, ಕರ್ನಾಟಕ 562125

ಮಾತುಕತೆಯ ಬಗ್ಗೆ

ಸಂಜೆಯ ಈ ಕಾರ್ಯಕ್ರಮದಲ್ಲಿ ಎಸ್ ವಿಶ್ವನಾಥ್ ಅಕಾ ಜೆನ್‌ರೈನ್‌ಮ್ಯಾನ್ ಅವರೊಂದಿಗೆ ನಡೆಸಲಾಗುವ ಮಾತುಕತೆಯಲ್ಲಿ ಸಾಂಪ್ರದಾಯಿಕ ವಿಧಾನದಲ್ಲಿ ಬಾವಿ ತೋಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶಂಕರ್ ಮತ್ತು ರಾಮಕೃಷ್ಣ ಭಾಗವಹಿಸಲಿದ್ದಾರೆ. ನೀರಿನ ಪ್ರತಿ ಹನಿ ಹನಿಯನ್ನು ಉಳಿಸುವ ಬಗೆ ಹೇಗೆ ಎಂಬುದರ ಕುರಿತು ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾರೆ.

ಪ್ರಸ್ತುತ, ಬೆಂಗಳೂರಿನಲ್ಲಿ ನೀರಿನ ಅಭಾವ ನಮಗೆ ಎದುರಾಗಿರುವ ಬೃಹತ್‌ಸಮಸ್ಯೆಯಾಗಿದೆ. ಸುತ್ತಮುತ್ತಲಿನ ಬಹುತೇಕ ಎಲ್ಲರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಜೊತೆಗೆ ನೀರಿನ ಈ ಸಮಸ್ಯೆಯ ಬಗ್ಗೆ ಅವರದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. ಪ್ರತಿವರ್ಷವೂ ಸತತವಾಗಿ ನೀರಿನ ಅಭಾವವನ್ನು ಎದುರಿಸುತ್ತಾ ಬಂದಿದ್ದರೂ ಹೆಚ್ಚಿನ ಮನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳು ಇನ್ನೂ ಮಳೆ ನೀರು ಕೊಯ್ಲು (ರೈನ್ ವಾಟರ್ ಹಾರ್ವೆಸ್ಟಿಂಗ್ — RWH) ಸೌಲಭ್ಯವನ್ನು ಅಳವಡಿಸಿಕೊಂಡಿಲ್ಲ. ಗ್ರಾಮಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಸಮುದಾಯದ ಬಾವಿಗಳಾಗಲೀ ಮತ್ತು ಇರುವ ಬಾವಿಗಳ ನಿರ್ವಹಣೆಯಾಗಲೀ ಸಮರ್ಪಕವಾಗಿ ನಡೆಯುತ್ತಿಲ್ಲ.

ಇಲ್ಲಿ ನಡೆಸಲಾಗುವ ಮಾತುಕತೆಯಲ್ಲಿ ನಾವು ಈ ಎಲ್ಲ ವಿಷಯಗಳ ಕುರಿತಾಗಿ ಚರ್ಚೆ ನಡೆಸುತ್ತೇವೆ. ಪ್ರಸ್ತುತ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಬಿಕ್ಕಟ್ಟನ್ನೂ ಗಮನದಲ್ಲಿಟ್ಟುಕೊಂಡು ಸಮುದಾಯದ ಜನರು ನೀರಿನ ಸಂರಕ್ಷಣೆಯ ಬಗ್ಗೆ ವಿಭಿನ್ನವಾಗಿ ಯೋಚಿಸಲು ಪ್ರಾರಂಭಿಸಬಹುದು.

ಜಲ ಸಂರಕ್ಷಣೆಯಲ್ಲಿ ಅಪಾರ ಅನುಭವ ಹೊಂದಿರುವ ಹಾಗೂ ಬಾವಿಗಳ ಪುನರುತ್ಥಾನ ಕಾರ್ಯಗಳನ್ನು ಕೈಗೆತ್ತಿಕೊಂಡಿರುವ ಸಮುದಾಯದೊಂದಿಗೆ ನಿಕಟವರ್ತಿಯಾಗಿ ಕೆಲಸ ಮಾಡಿರುವ ವಿಶ್ವನಾಥ್ ಇಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.

ಈ ಮಾತುಕತೆಯಲ್ಲಿ ಗ್ರಾಮಗಳಲ್ಲಿ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಎರಡರಲ್ಲೂ ವಾಸಿಸುವವ ಸದಸ್ಯರು ಪಾಲ್ಗೊಳ್ಳುವುದರಿಂದ ಸಂವಾದವು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಡೆಯುತ್ತದೆ.

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ವಾರಾಂತ್ಯದ ಕಾರ್ಯಕ್ರಮದ ಕುರಿತು

ನಮ್ಮ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಸರ್ಜಾಪುರ ಮತ್ತು ಇನ್ನಿತರ ಅಕ್ಕಪಕ್ಕದ ಪ್ರದೇಶಗಳಲ್ಲಿ ಸ್ಥಳೀಯ ಸಮುದಾಯಕ್ಕಾಗಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಹೊಸ ಉಪಕ್ರಮವನ್ನು ನಾವು ಆರಂಭಿಸಿದ್ದೇವೆ. ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ಎಲ್ಲರಿಗೂ ಸ್ಫೂರ್ತಿದಾಯಕವಾಗಬಲ್ಲ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಎಲ್ಲರೂ ಒಂದಾಗಿ ಸಂಜೆಯನ್ನು ಸುಂದರವಾಗಿಸಲು ಸ್ಥಳೀಯ ಸಮುದಾಯಕ್ಕೆ ವಿಶ್ವವಿದ್ಯಾಲಯವನ್ನು ವೇದಿಕೆಯನ್ನಾಗಿಸುವುದು ನಮ್ಮ ಉದ್ಧೇಶ.

ಹೆಚ್ಚಿನ ಮಾಹಿತಿಗಾಗಿ, weekend.​events@​apu.​edu.​in ನಲ್ಲಿ ನಮ್ಮನ್ನು ಸಂಪರ್ಕಿಸಿ

ಗಮನಿಸಿ: ಈ ಕಾರ್ಯಕ್ರಮಕ್ಕಾಗಿ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಭೇಟಿ ನೀಡುವಾಗ ನಿಮ್ಮ ಗುರುತಿಗಾಗಿ ಫೋಟೋ ಐಡಿ (ಆಧಾರ್/ ಮತದಾರರ ಗುರುತಿನ ಚೀಟಿ/ಪಾನ್ ಕಾರ್ಡ್) ತರಲು ದಯವಿಟ್ಟು ಮರೆಯದಿರಿ.