Launch | Sahitya Sahavasa: Video Lecture Series

We invite you to the launch of Sahitya Sahavasa, a video lecture series by the late Prof U R Ananthamurthy and accompanying literary and cultural event.

24th poster final

The lecture series throws light on the contributions of prominent Kannada writers of the 20th century and reflects upon key literary movements. 

The day-long programme will feature panel discussions involving eminent litterateurs, recitation of Bendre’s poems, an exhibition of portraits/​artworks of renowned writers and anecdotes about Bendre from his close associates.

Programme Schedule

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು, ಮಾರ್ಚ್‌24, 2024ರಂದು ಧಾರವಾಡದಲ್ಲಿ ನಡೆಯುತ್ತಿರುವ ಸಾಹಿತ್ಯ ಸಹವಾಸ’ — ದಿ. ಪ್ರೊ. ಯು. ಆರ್‌. ಅನಂತಮೂರ್ತಿ ಅವರ ವಿಡಿಯೊ ಉಪನ್ಯಾಸ ಸರಣಿ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿಮ್ಮನ್ನು ಆಹ್ವಾನಿಸುತ್ತಿದೆ. ಈ ಉಪನ್ಯಾಸ ಸರಣಿಯು ಇಪ್ಪತ್ತನೇ ಶತಮಾನದ ಕನ್ನಡದ ಪ್ರಮುಖ ಬರಹಗಾರ ಕೊಡುಗೆಗಳು ಹಾಗೂ ಪ್ರಮುಖ ಸಾಹಿತ್ಯಕ ಚಳುವಳಿಗಳ ಮೇಲೆ ಬೆಳಕು ಚೆಲ್ಲುತ್ತವೆ.

ಕಾರ್ಯಕ್ರಮದಲ್ಲಿ ವಿದ್ವತ್‌ಗೋಷ್ಠಿಗಳು, ಬೇಂದ್ರೆಯವರ ಕವಿತೆಗಳ ವಾಚನ ಮತ್ತು ಗಾಯನ, ಬೇಂದ್ರೆಯವರ ಒಡನಾಡಿಗಳ ನೆನಪುಗಳ ಹಂಚಿಕೆ, ಪ್ರಮುಖ ಸಾಹಿತಿಗಳ ಕಲಾಕೃತಿಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ವಿವರ

ಬೇಂದ್ರೆಯವರ ಬದುಕು-ಬರಹಗಳ ವಿಶಿಷ್ಟತೆಯ ಬಗೆಗೆ ಪ್ರೊ. ಯು. ಆರ್‌. ಅನಂತಮೂರ್ತಿಯವರು ಪರ್ಯಾಲೋಚಿಸಿದ್ದಾರೆ. ಬೇಂದ್ರೆಯವರ ಕಾವ್ದದ ಹಿಂದಿನ ಪ್ರೇರಣೆ, ಅವುಗಳ ಉದಾತ್ತತೆ, ಕುವೆಂಪು-ಬೇಂದ್ರೆ ಬರಹಗಳ ಅನನ್ಯತೆ, ಅವರೀರ್ವರ ನಡುವಿನ ಸ್ನೇಹಪರತೆ ಇಂಥ ಆಸಕ್ತಿಕರ ಸಂಗತಿಗಳು ಈ ವಿಡಿಯೊ ತುಣುಕಿನಲ್ಲಿದೆ.

ಕನ್ನಡ ಭಾಷೆಯ ಸಮೃದ್ಧತೆ ಕುರಿತು ಪ್ರೊ. ಯು ಆರ್‌ಅನಂತಮೂರ್ತಿ ಅವರು ವಿನಿಧ ಆಯಾಮಗಳಿಂದ ವಿಶ್ಲೇಷಿಸಿದ್ದಾರೆ. ಕನ್ನಡದ ಸ್ವೀಕಾರಾರ್ಹ ಗುಣ, ಪ್ರಾದೇಶಿಕ ಸೊಗಡನ್ನು ಒಳಗೊಳ್ಳುತ್ತಲೇ ಅದನ್ನು ಮೀರಿ ನಿಂತಿರುವುದು ಹಾಗೂ ಇಪ್ಪತ್ತನೇ ಶತಮಾನದ ಶ್ರೇಷ್ಠ ಸಾಹಿತಿಗಳ ಕೊಡುಗೆಗಳ ಬಗೆಗಿನ ಚಿಂತನೆಯನ್ನು ಈ ವಿಡಿಯೊ ಭಾಗದಲ್ಲಿ ವೀಕ್ಷಿಸಿ-ಆಲಿಸಿ.