ರಾಷ್ಟ್ರೀಯ ಇಸಿಸಿಇ ಪಠ್ಯಕ್ರಮ ಚೌಕಟ್ಟು

ಈ ವಿಷಯದ ಪ್ರಸ್ತುತತೆಯ ಬಗೆಗೆ ಮನೋವಿಜ್ಞಾನದ ನಿವೃತ್ತ ಪ್ರಾದ್ಯಾಪಕರಾದ ಡಾ.ಇಂದಿರಾ ಜಯಪ್ರಕಾಶ್, ಶಿಕ್ಷಣ ತಜ್ಞ ಶಿವಾನಂದ ಹೊಂಬಳ ಇವರೊಂದಿಗೆ ಎಸ್.ವಿ ಮಂಜುನಾಥ್ ಅವರು ಸಂವಾದ ನಡೆಸುತ್ತಾರೆ.

ECCE Webinar in Kannada 20th April 2023 pdf

ವಿನೂತನ ಶೈಕ್ಷಣಿಕ ಸಂಪನ್ಮೂಲಗಳನ್ನೊಳಗೊಂಡ ಅನುವಾದ ಸಂಪದದಲ್ಲಿನ ಲೇಖನಗಳ ಸುತ್ತ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕ ಶಿಕ್ಷಕರು, ವೃತ್ತಿಪರರು ಮತ್ತು ಶಿಕ್ಷಣಾಸಕ್ತರು ಕನ್ನಡದಲ್ಲಿಯೇ ಸೂಕ್ಷ್ಮವಾದ ಚರ್ಚೆ, ಸ್ವತಂತ್ರವಾದ ಓದು, ಬರವಣಿಗೆ ಮತ್ತು ಪರ್ಯಾಲೋಚನೆಯಲ್ಲಿ ತೊಡಗುವಂತೆ ಮಾಡಲು ಆಯೋಜಿಸಲಾಗುತ್ತಿರುವ ಮಾಸಿಕ ವೆಬಿನಾರ್ ಸರಣಿಯ ಮೂರನೆಯ ಚರ್ಚೆ ಇದಾಗಿದೆ.

ನೂತನ ಶಿಕ್ಷಣ ನೀತಿಯಂತೆ 3 ರಿಂದ 6ರ ವಯೋಮಾನದ ಮಕ್ಕಳ ಕಲಿಕೆಯ ನಿರ್ವಹಣೆಯನ್ನು ಶಾಲಾ ಶಿಕ್ಷಣದಡಿ ತರಲಾಗಿದೆ. 3 ರಿಂದ 8ರ ವಯೋಮಾನದ ಮಕ್ಕಳ ಪಠ್ಯಕ್ರಮವನ್ನು ಬುನಾದಿ ಹಂತವೆಂದು ಗುರುತಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಬುನಾದಿ ಹಂತಕ್ಕಾಗಿ ಪಠ್ಯಕ್ರಮ ಚೌಕಟ್ಟನ್ನು ಅನುಷ್ಠಾನಗೊಳಿಸಲಾಗಿದೆ. ಇವುಗಳಿಗೆ ರಾಷ್ಟ್ರೀಯ ಇಸಿಸಿಇ ಪಠ್ಯಕ್ರಮ ಚೌಕಟ್ಟು 2013 ತಾತ್ವಿಕ ತಳಹದಿ ಒದಗಿಸುತ್ತದೆ. ಈ ವಿಷಯದ ಪ್ರಸ್ತುತತೆಯ ಬಗೆಗೆ ಮನೋವಿಜ್ಞಾನದ ನಿವೃತ್ತ ಪ್ರಾಧ್ಯಾಪಕರಾದ ಡಾ.ಇಂದಿರಾ ಜೈಪ್ರಕಾಶ್ ಹಾಗೂ ಸಂಪನ್ಮೂಲ ವ್ಯಕ್ತಿ ಮತ್ತು ಧ್ವನಿ ಟ್ರಸ್ಟ್ ನ ಶಿವಾನಂದ ಹೊಂಬಳ ಇವರೊಂದಿಗೆ ಶ್ರೀ. ಎಸ್.ವಿ ಮಂಜುನಾಥ್ ಅವರು ಸಂವಾದ ನಡೆಸುತ್ತಾರೆ.

ಡಾ. ಇಂದಿರಾ ಜೈಪ್ರಕಾಶ್ – ಲೇಖಕರು ಮತ್ತು ನಿವೃತ್ತ ಪ್ರಾಧ್ಯಾಪಕರು, ಮನೋವಿಜ್ಞಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಹಾಗೂ ಶ್ರೀ. ಶಿವಾನಂದ ಹೊಂಬಳ – ನಿರ್ದೇಶಕರು ಮತ್ತು ಸಂಪನ್ಮೂಲ ವ್ಯಕ್ತಿ, ಧ್ವನಿ ಟ್ರಸ್ಟ್, ಬೆಂಗಳೂರು, ಇವರು ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾರೆ.

ಇವರೊಂದಿಗಿನ ಸಂವಾದವನ್ನು ನಡೆಸಿಕೊಡುವವರು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಶ್ರೀ.ಎಸ್.ವಿ.ಮಂಜುನಾಥ್.

ಚರ್ಚೆಯು ಕನ್ನಡದಲ್ಲಿಯೇ ನಡೆಯುತ್ತದೆ.

ಲೇಖನವನ್ನು ಓದಲು ಈ ಲಿಂಕ್ https://​bit​.ly/​4​0​hmKh4 ನ್ನು ಬಳಸಿ.

ಅನುವಾದ ಸಂಪದ ನೋಡಲು