ಮಕ್ಕಳಿಗೆ ಜವಾಬ್ದಾರಿಯನ್ನು ವಹಿಸುವುದು

ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಬೆಳೆಸುವ ನಿಟ್ಟಿನಲ್ಲಿ ಶಾಲೆಯ ವಿವಿಧ ಕ್ಷೇತ್ರಗಳಲ್ಲಿ ಪಾರದರ್ಶಕತೆ ಮತ್ತು ಎಲ್ಲ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ದೃಢಪಡಿಸುವುದು ಹೇಗೆ ಎಂಬುದನ್ನು ಕುರಿತು ಯಾದಗಿರಿಯ ಅಜೀಂ ಪ್ರೇಮ್ ಜಿ ಶಾಲೆಯ ಅನುಭವವನ್ನು ಪ್ರಾಂಶುಪಾಲರಾದ ಅನಿಲ್ ಎಸ್ ಅಂಗಡಿಕಿ ಅವರು ಹಂಚಿಕೊಳ್ಳುತ್ತಾರೆ. 

LC kannada Twitter

ಶಿಕ್ಷಣದ ಮೂಲಕ ಮುಕ್ತ ಮತ್ತು ತಾರ್ಕಿಕ ಚಿಂತನೆಯನ್ನು ವ್ಯಕ್ತಿಯಲ್ಲಿ ಬೆಳೆಸುವಾಗ ಎದುರಾಗುವ ಸವಾಲುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬಹುದು? ಶಾಲೆಯ ವಿವಿಧ ಕ್ಷೇತ್ರಗಳಲ್ಲಿ ಗಮನ ವಹಿಸುವುದಕ್ಕಾಗಿ ಪಾರದರ್ಶಕತೆ ಮತ್ತು ಎಲ್ಲ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ದೃಢಪಡಿಸುವುದು ಹೇಗೆ?

ಲೇಖನವನ್ನು ಓದಲು ಈ ಲಿಂಕ್ — https://​bit​.ly/​3​I​kRHeE ನ್ನು ಬಳಸಿ.

ವಿದ್ಯಾರ್ಥಿಗಳ ವಿವಿಧ ಸಮಿತಿಗಳನ್ನು ರಚಿಸಿ ಶಿಕ್ಷಕರು ಶಾಲಾ ಚಟುವಟಿಕೆಗಳು ಸುಗಮವಾಗಿ ನಡೆಯುವಂತೆ ಮಾರ್ಗದರ್ಶನ ನೀಡಿದ ಪ್ರಯತ್ನಗಳನ್ನು ಕುರಿತು ಯಾದಗಿರಿಯಲ್ಲಿಯ ಅಜೀಂ ಪ್ರೇಮ್ ಜಿ ಶಾಲೆಯ ಪ್ರಾಂಶುಪಾಲರಾದ ಅನಿಲ್ ಅಂಗಡಿಕಿ ಅವರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ. ಇವರೊಂದಿಗಿನ ಚರ್ಚೆಯನ್ನು ನಡೆಸಿಕೊಡುವವರು ಎಸ್ ವಿ ಮಂಜುನಾಥ್, ಸಹನಿರ್ದೇಶಕರು, ಅನುವಾದ ಉಪಕ್ರಮ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿ, ಬೆಂಗಳೂರು.

ವಿನೂತನ ಶೈಕ್ಷಣಿಕ ಸಂಪನ್ಮೂಲಗಳನ್ನೊಳಗೊಂಡ ಅನುವಾದ ಸಂಪದ’ದಲ್ಲಿನ ಲೇಖನಗಳ ಸುತ್ತ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕ ಶಿಕ್ಷಕರು, ವೃತ್ತಿಪರರು ಮತ್ತು ಶಿಕ್ಷಣಾಸಕ್ತರು ಸೂಕ್ಷ್ಮವಾದ ಚರ್ಚೆ, ಸ್ವತಂತ್ರವಾದ ಓದು, ಬರವಣಿಗೆ ಮತ್ತು ಪರ್ಯಾಲೋಚನೆಯಲ್ಲಿ ತೊಡಗುವಂತೆ ಮಾಡಲು ಆಯೋಜಿಸಲಾಗುತ್ತಿರುವ ಮಾಸಿಕ ವೆಬಿನಾರ್ ಸರಣಿಯ ಮೊದಲನೆಯ ಚರ್ಚೆ ಇದಾಗಿದೆ. ಚರ್ಚೆಯು ಕನ್ನಡದಲ್ಲಿಯೇ ನಡೆಯುತ್ತದೆ. 

ಅನಿಲ್ ಎಸ್. ಅಂಗಡಿಕಿ ಅವರೊಂದಿಗೆ ಎಸ್. ವಿ ಮಂಜುನಾಥ್ ಅವರು ಸಂವಾದ ನಡೆಸುವರು.

ಚರ್ಚೆಯು ಕನ್ನಡದಲ್ಲಿಯೇ ನಡೆಯುತ್ತದೆ.