So you passed 12th and want to be an engineer? Draw inspiration from the life of Sir M Visvesvaraya

Sir M Visvesvaraya was more than an engineer. He was a disciplined polymath with eclectic pursuits, a social change-maker, a principled statesman, and a lifelong learner. In this special episode of Noorakke Nooru Karnataka, Shraddha Jain converses with Sudheesh Venkatesh and Mala Kumar about the exemplary mindset of one of Karnataka’s most illustrious sons, an engineer with a conscience.

Visvesvaraya Website Banner

What do our nation’s engineers do? Do they build the temples of modern India? Do they design technology to create an equitable society? 

In 2019, a NASSCOM survey revealed that of about 15 lakh students who graduate with engineering degrees every year, only 2.5 lakh find jobs, leave alone purpose in their work. Long commutes to the office, unproductive meetings, filling time sheets — such is an engineer’s life today. And yet, more and more Indians are drawn to the lucre of engineering careers. 

As another batch of engineer-aspirants attempts the joint entrance examination (JEE), it is an opportune time to ponder the role of engineers in our society. And, while doing that, we take a moment to remember one eminent engineer whose work and life shine a beacon for not just his fellow Kannadigas, but Indians everywhere.

Sir Mokshagundam Visvesvaraya’s birthday is observed as Engineer’s Day in India. Born on September 15, 1861 in the village of Muddenahalli about 60 km from Bengaluru, Visvesvaraya was told that he was of poor health and would not live long. His parents, who had migrated from Andhra, ignored the disturbing prophecy and gave him a good education. Young Visvesvaraya continued his studies in Bangalore and got his bachelor’s degree from Madras. Later, he graduated with an engineering degree from Pune’s College of Science under the University of Bombay. 

Visvesvaraya applied his education to solving the problems of India. From irrigation to public works, he left his mark on many projects in the Deccan Plateau. His solutions for protecting the city of Hyderabad against flooding, and another for preventing sea erosion of the port of Visakhapatnam, are considering marvels of engineering even today. 

A high point in his career, for which he shall always be remembered with gratitude in Karnataka, was the construction of the Krishna Raja Sagar dam in the princely state of Mysore. As Chief Engineer, Sir MV designed what was then India’s largest dam with automatic sluice gates. He advised that the dam be constructed not with expensive cement but with a low-cost mortar called surkhi, made from crushed burnt bricks, which gains strength if left immersed in water.

At the age of 90, he inspected the site of the proposed Mokama Bridge over the Ganga in Bihar. Eyewitnesses reported that Sir MV climbed to the top of a hill to survey the site, before submitting multiple drawings. 

And, yet, Sir M Visvesvaraya was more than an engineer. He was a disciplined polymath with eclectic pursuits, a social change-maker, a principled statesman, and a lifelong learner. He set up the Kannada Sahitya Parishad to unite Kannadigas through a better appreciation of their culture, language, and literature. He was instrumental in setting up the Bank of Mysore to bring financial inclusion to the people of the state.

Sir MV lived to the ripe old age of 100. Writing in his clear and legible hand, with his thoughtful and expressive vocabulary, he replied individually to the over 400 letters that he received on his centennial birthday. 

Why Sir M Visvesvaraya was fashionably punctual!

In this special episode of Noorakke Nooru Karnataka, Shraddha converses with Sudheesh Venkatesh and Mala Kumar about the exemplary life of one of Karnataka’s most illustrious sons, an engineer with a conscience.

Shraddha Jain, as Aiyyo Shraddha, is a popular internet content creator. Mala Kumar is an educator and author of Sir M Visvesvaraya — The Builder of Dams, Bridges and a Nation’ illustrated by Sir MV’s grand-nephew Seshadri Mokshagundam. Sudheesh Venkatesh is Head of Communication at Azim Premji Foundation.

Noorakke Nooru Karnataka is a podcast series from Radio Azim Premji University that celebrates the sons and daughters that make Karnataka proud. Don’t forget to listen to the previous episodes in this series.

CREDITS

Akshay Ramuhalli, Bijoy Venugopal, Bruce Lee Mani, Narayan Krishnaswamy, Prashant Vasudevan, Sananda Dasgupta, Sanath GS, Seema Seth, Shraddha Gautam, Supriya Joshi, and Velu Shankar

ಭಾರತದ ಇಂಜಿನಿಯರ್‌ಗಳು ಏನ್ ಮಾಡ್ತಾರೆ? ಅವರು ಆಧುನಿಕ ಭಾರತದ ದೇವಾಲಯಗಳನ್ನು ಕಟ್ಟುತ್ತಾರೋ? ಸಮಾನ ಸಮಾಜವನ್ನು ರಚಿಸುವ ತಂತ್ರಜ್ಞಾನವನ್ನು ವಿನ್ಯಾಸಗೊಳಿಸುತ್ತಾರೋ?

ಎರಡು ಸಾವಿರ ಹತ್ತೊಂಬತ್ತರಲ್ಲಿ ನಡೆದ NASSCOM ಸಮೀಕ್ಷೆಯ ಪ್ರಕಾರ, ಇಂಜಿನಿಯರಿಂಗ್ ಪದವಿ ಪಡೆದ ಸುಮಾರು 15 ಲಕ್ಷ ವಿದ್ಯಾರ್ಥಿಗಳಲ್ಲಿ ಕೇವಲ 2.5 ಲಕ್ಷ ವಿದ್ಯಾರ್ಥಿಗಳು ಮಾತ್ರ ಉದ್ಯೋಗವನ್ನು ಪಡೆದಿದ್ದಾರೆ ಎಂದು ತಿಳಿದುಬಂತು. ಅದರಲ್ಲಿ ಉದ್ದೇಶಪೂರ್ವಕವಾಗಿ ಉದ್ಯೋಗದಲ್ಲಿರುವರು ಎಷ್ಟು ಜನ ಇರಬಹುದೋ ಏನೋ.
ಆಫೀಸಿಗೆ ಲಾಂಗ್ ಡ್ರೈವ್, ಅಗತ್ಯವಿಲ್ಲದ ಮೀಟಿಂಗ್ ಗಳು, ತುಂಬಿಸಬೇಕಾದ ಟೈಮ್ ಶೀಟ್ ಗಳು — ಇವೇ ಇಂಜಿನಿಯರ್ಗಳ ಜೀವನವಾಗಿದೆ. ಆದರೂ ಕೂಡ, ಹೆಚ್ಚೆಚ್ಚು ಭಾರತೀಯರು ಇಂಜಿನಿಯರಿಂಗ್ ವೃತ್ತಿಗಳಲ್ಲಿರುವ ಲಾಭವನ್ನು ನೋಡಿ ಆಕರ್ಷಿತರಾಗಿದ್ದಾರೆ.

ಇನ್ನೀಗ ಇಂಜಿನಿಯರ್-ಆಕಾಂಕ್ಷಿಗಳ ಮತ್ತೊಂದು ಬ್ಯಾಚ್ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮ್ (ಜೆಇಇ) ಬರೆಯೋದಿಕ್ಕೆ ತಯಾರಾಗ್ತಿದ್ದಾರೆ. ಆದ್ದರಿಂದ, ನಮ್ಮ ಸಮಾಜದಲ್ಲಿ ಎಂಜಿನಿಯರ್‌ಗಳ ಪಾತ್ರ ಏನು ಎಂದು ಆಲೋಚನೆ ಮಾಡುವುದಕ್ಕೆ ಇದು ಸೂಕ್ತ ಸಮಯ. 
ಈ ಸಮಯದಲ್ಲಿ, ಒಬ್ಬ ಪ್ರಖ್ಯಾತ ಇಂಜಿನಿಯರ್ ನೆನಪಿಗೆ ಬರ್ತಾರೆ. ಇವರ ಕೆಲಸ ಮತ್ತು ಜೀವನ, ಕನ್ನಡಿಗರಿಗೆ ಮಾತ್ರವಲ್ಲ ಎಲ್ಲೆಡೆ ಇರುವ ಭಾರತೀಯರಿಗೆ ಸ್ಫೂರ್ತಿಯಾಗಿದೆ.

ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಇವರ ಹುಟ್ಟುಹಬ್ಬವನ್ನು ಇಂಜಿನಿಯರ್ ದಿನಾಚಾರಣೆ ಎಂದು ಭಾರತದಾದ್ಯಂತ ಆಚರಿಸಲಾಗುತ್ತದೆ. 1861 ನೇ ಇಸವಿ, ಸೆಪ್ಟೆಂಬರ್ 15. ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ, ಮುದ್ದೇನಹಳ್ಳಿ ಗ್ರಾಮದಲ್ಲಿ ಜನಿಸಿದ ವಿಶ್ವೇಶ್ವರಯ್ಯನವರಿಗೆ ಆರೋಗ್ಯ ಸರಿಯಿರಲಿಲ್ಲ. ಹೆಚ್ಚು ದಿನ ಬದುಕುವುದಿಲ್ಲ ಎಂದು ಹೇಳಿದ್ದರು. 
ಆಂಧ್ರಪ್ರದೇಶದಿಂದ ವಲಸೆ ಬಂದಿದ್ದ ಈತನ ತಂದೆ ತಾಯಿ, ಗೊಂದಲದ ಭವಿಷ್ಯವನ್ನು ಗಮನದಿಂದ ತೆಗೆದುಹಾಕಿ ಅವರಿಗೆ ಉತ್ತಮ ಶಿಕ್ಷಣ ನೀಡಿದರು. ಯುವಕನಾಗಿ ಬೆಳೆದ ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು ಮತ್ತು ಮದ್ರಾಸ್‌ನಿಂದ ಪದವಿ ಪಡೆದರು. ನಂತರ, ಅವರು ಬಾಂಬೆ ವಿಶ್ವವಿದ್ಯಾಲಯದ ಅಡಿಯಲ್ಲಿ ಪೂಣೇಯಲ್ಲಿರೋ ಕಾಲೇಜ್ ಆಫ್ ಸೈನ್ಸ್‌ನಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡ್ರು.

ವಿಶ್ವೇಶ್ವರಯ್ಯನವರು ತಾವು ಪಡೆದ ಶಿಕ್ಷಣವನ್ನು ಭಾರತದ ಸಮಸ್ಯೆಗಳಿಗೆ ಪರಿಹಾರ ನೀಡಲು ಬಳಸಿದರು. 
ಡೆಕ್ಕನ್ ಪ್ಲೇಟುವಿನ ಅನೇಕ ಯೋಜನೆಗಳಲ್ಲಿ ಸಾರ್ವಜನಿಕ ಕಾರ್ಯಗಳಿಂದ ಹಿಡಿದು ನೀರವರಿಯವರೆಗೆ, ಅವರ ಬೆರಳಚ್ಚಿದೆ.
ಹೈದರಾಬಾದ್ ನಗರಕ್ಕೆ ಅವರು ನೀಡಿದ ಪ್ರವಾಹ ರಕ್ಷಣೆ ಪರಿಹಾರ ಮತ್ತು ವಿಶಾಖಪಟ್ಟಣಂ ಪೋರ್ಟ್ ನ ಸಮುದ್ರ ಸವೆತ ತಡೆಗಟ್ಟಲು ನೀಡಿದ ಪರಿಹಾರವು ಇಂದಿಗೂ ಎಂಜಿನಿಯರಿಂಗ್‌ಅದ್ಭುತ ಸಾಧನೆಗಲಾಗಿ ಉಳಿದಿವೆ.

ಮೈಸೂರು ಸಂಸ್ಥಾನದಲ್ಲಿ ನಿರ್ಮಾಣವಾದ ಕೃಷ್ಣ ರಾಜ ಸಾಗರ ಅಣೆಕಟ್ಟು, ಅವರ ವೃತ್ತಿಜೀವನದಲ್ಲಿ ಒಂದು ಪ್ರಮುಖ ಹಂತವಾಗಿದೆ. ಇದಕ್ಕಾಗಿ ಕರ್ನಾಟಕದ ಜನತೆ ಅವರಿಗೆ ಈಗಲೂ ಕೃತಜ್ಞತೆ ಕೋರುತ್ತಾರೆ. ಸ್ವಯಂಚಾಲಿತ ಸ್ಲೂಸ್ ಗೇಟ್‌ಗಳಿರುವ ಈ ಆಣೆಕಟ್ಟು, ಅಂದಿಗೆ ಭಾರತದದಲ್ಲಿ ಅತಿದೊಡ್ಡದಾಗಿತ್ತು. ಚೀಫ್ ಇಂಜಿನಿಯರಾಗಿದ್ದ, ಸರ್ ಎಂ ವಿಶವೇಶ್ವರಯ್ಯ ಅವರು, ಅಣೆಕಟ್ಟನ್ನು ದುಬಾರಿ ಸಿಮೆಂಟ್ ಬಳಸಿ ಕಟ್ಟುವ ಬದಲು, ಸುಟ್ಟ ಇಟ್ಟಿಗೆಗಳನ್ನು ಪುಡಿಮಾಡಿ, ನೀರಿನಲ್ಲಿ ಮುಳುಗಿಸಿದರೆ ಸುರ್ಖಿ ಎಂಬ ಸಿಗುವ ಗಾರೆ ಬಳಸಿ ಕಟ್ಟಿದರೆ, ಹೆಚ್ಚು ಗಟ್ಟಿಯಾಗಿರುತ್ತದೆ ಮತ್ತು ಕಟ್ಟುವ ಖರ್ಚು ಕೂಡ ಕಡಿಮೆಯಾಗುತ್ತದೆ ಎಂದು ಸಲಹೆ ಕೊಟ್ಟಿದ್ದರು. 

90 ನೇ ವಯಸ್ಸಿನಲ್ಲಿ, ಅವರು ಬಿಹಾರದಲ್ಲಿ ಗಂಗಾ ನದಿಯ ಮೇಲೆ ಮೊಕಾಮಾ ಸೇತುವೆ ಕಟ್ಟಲಿರುವ ಸ್ಥಳವನ್ನು ಪರಿಶೀಲನೆ ಮಾಡಿದ್ದರು. ಅಲ್ಲಿದ್ದ ಜನರು ಕಂಡಂತೆ, ವಿಶ್ವೇಶ್ವರಯ್ಯನವರು, ಸೈಟ್ ಅನ್ನು ಸಮೀಕ್ಷೆ ಮಾಡಲು ಬೆಟ್ಟದ ತುದಿಯವರೆಗೂ ಹತ್ತಿ ಪರಿಶೀಲಿಸಿ ಅನೇಕ ಬ್ಲೂಪ್ರಿಂಟ್ ಗಳು ತಯಾರಿಸಿ ಕೊಟ್ಟರಂತೆ.

ಇದಷ್ಟೇಯಲ್ಲ, ಸರ್ ಎಂ ವಿಶ್ವೇಶ್ವರಯ್ಯನವರು ಕೇವಲ ಒಬ್ಬ ಇಂಜಿನಿಯರ್ ಮಾತ್ರವಲ್ಲ .ಅವರು ಬಹುಶ್ರುತರಾಗಿದ್ದರು, ವಿಶಾಲದೃಷ್ಟಿಯ ಹವ್ಯಾಸಗಳಿದ್ದವು. ಅವರು ಸಾಮಾಜಿಕ ಬದಲಾವಣೆ ಮಾಡುವವರು, ತತ್ವಬದ್ಧ ರಾಜನೀತಿಜ್ಞರು ಮತ್ತು ಜೀವನಪರ್ಯಂತ ಕಲಿಯುವವರಾಗಿದ್ದರು. ಕನ್ನಡಿಗರು ತಮ್ಮ ಸಂಸ್ಕೃತಿ, ಭಾಷೆ ಮತ್ತು ಸಾಹಿತ್ಯದ ಅಭಿಮಾನದ ಮೂಲಕ ಅವರನ್ನು ಒಗ್ಗೂಡಿಸಲು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ರಾಜ್ಯದ ಜನತೆಗೆ ಆರ್ಥಿಕ ಸೇರ್ಪಡೆ ತರಲು ಬ್ಯಾಂಕ್ ಆಫ್ ಮೈಸೂರು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಸರ್ ಎಂ ವಿಶ್ವೇಶ್ವರಯ್ಯನವರು ನೂರು ವರ್ಷಗಳು ಈ ಪ್ರಪಂಚದಲ್ಲಿ ಬಾಳಿದರು. ಅವರು ತಮ್ಮ ಶತಮಾನೋತ್ಸವದ ಹುಟ್ಟುಹಬ್ಬದಂದು 400ಕ್ಕೂ ಹೆಚ್ಚು ಪತ್ರಗಳಿಗೆ ಉತ್ತರಿಸಿದ್ದರು. ಅವರ ಸ್ಪಷ್ಟ ಬರವಣಿಗೆಯಿಂದ ಮತ್ತು ವಿಚಾರಪೂರ್ಣ ಪದಗಳು ಇಂದಿಗೂ ಎಲ್ಲರ ಮನಸಲ್ಲಿ ಉಳಿದಿವೆ.

ನೂರಕ್ಕೆ ನೂರು ಕರ್ನಾಟಕದ ಈ ವಿಶೇಷ ಸಂಚಿಕೆಯಲ್ಲಿ , ಶ್ರದ್ಧಾ ಅವರು ಸುಧೀಶ್ ವೆಂಕಟೇಶ್ ಮತ್ತು ಮಾಲಾ ಕುಮಾರ್ ಅವರೊಂದಿಗೆ ಕರ್ನಾಟಕದ ಅತ್ಯಂತ ಪ್ರತಿಷ್ಠಿತ ಪುತ್ರರಲ್ಲಿ ಒಬ್ಬರಾದ, ಆತ್ಮಸಾಕ್ಷಿಯುಳ್ಳ ಇಂಜಿನಿಯರ್‌ನ ಆದರ್ಶಪ್ರಾಯ ಜೀವನದ ಬಗ್ಗೆ ಸಂವಾದಿಸಿದ್ದಾರೆ.

ಶ್ರದ್ಧಾ ಜೈನ್, ಅಯ್ಯೋ ಶ್ರದ್ಧಾ ಎಂದು ಪ್ರಸಿದ್ಧರಾಗಿರುವ ಇಂಟರ್ನೆಟ್ ಕಂಟೆಂಟ್ ಕ್ರಿಯೇಟರ್. ಮಾಲಾ ಕುಮಾರ್ ಅವರು ಶಿಕ್ಷಣತಜ್ಞೆ ಮತ್ತು‘ಸರ್ ಎಂ ವಿಶ್ವೇಶ್ವರಯ್ಯ — ದಿ ಬಿಲ್ಡರ್ ಆಫ್ ಡ್ಯಾಮ್ಸ್, ಬ್ರಿಡ್ಜಸ್ ಅಂಡ್ ಎ ನೇಷನ್’ ಎಂಬ ಪುಸ್ತಕದ ಲೇಖಕಿಯಾಗಿದ್ದು, ಇದು ಸರ್ ಎಂವಿಯ ಮೊಮ್ಮಗ ಶೇಷಾದ್ರಿ ಮೋಕ್ಷಗುಂಡಂ ಅವರಿಂದ ಚಿತ್ರಿತವಾಗಿದೆ. ಅವರು ಅಜೀಂ ಪ್ರೇಮ್ಜಿ ಫೌಂಡೇಶನ್‌ನ ಸಂವಹನ ಮುಖ್ಯಸ್ಥರು ಸುಧೀಶ್ ವೆಂಕಟೇಶ್.

ನೂರಕ್ಕೆ ನೂರು ಕರ್ನಾಟಕ ಎಂಬುದು ರೇಡಿಯೊ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪಾಡ್‌ಕ್ಯಾಸ್ಟ್, ಇದು ಕರ್ನಾಟಕದ ಹೆಮ್ಮೆಯ ಪುತ್ರರು ಮತ್ತು ಪುತ್ರಿಯರ ಕಥೆಗಳನ್ನು ಆಚರಿಸಲು ಮಾಡಿರುವ ವಿಶೇಷ ಪ್ರದರ್ಶನ. ಈ ಸರಣಿಯ ಹಿಂದಿನ ಸಂಚಿಕೆಗಳನ್ನು ಕೂಡ ಮರೆಯದೆ ಕೇಳಿರಿ.

ಕ್ರೆಡಿಟ್ಸ್: 

ಅಕ್ಷಯ್ ರಾಮುಹಳ್ಳಿ, ಬಿಜೋಯ್ ವೇಣುಗೋಪಾಲ್, ಬ್ರೂಸ್ ಲೀ ಮಣಿ, ನಾರಾಯಣ ಕೃಷ್ಣಸ್ವಾಮಿ, ಪ್ರಶಾಂತ್ ವಾಸುದೇವನ್, ಸಾನಂದ ದಾಸ್ ಗುಪ್ತಾ, ಸನತ್ ಜಿ.ಎಸ್., ಸೀಮಾ ಸೇಠ್, ಶ್ರದ್ಧಾ ಗೌತಮ್, ಸುಪ್ರಿಯಾ ಜೋಶಿ, ಮತ್ತು ವೇಲು ಶಂಕರ್

RESOURCES AND ACKNOWLEDGEMENTS:

A. YouTube:

B. News features:

C. Books:

D. Journal Articles and Research Papers

Listen to more episodes in this series