Bhoota Kola — ಭೂತ ಕೋಲ | Talking to Ancestral Spirits in Dakshina Kannada

In the second episode of our Kannada series Noorakke Nooru Karnataka [100 / 100 Karnataka], Shraddha has an absorbing conversation with Umashanker Periodi on the rich tradition of Bhoota Kola in Dakshina Kannada’s coastal region of Tulunadu. Periodi explains that Bhootas — ancestral spirits — are often a symbolic manifestation of entities or powers feared or revered by communities that worship them. Listen on your favourite podcast platforms.

Bhoota Kola banner

For the people of Dakshina Kannada, Bhootas are above god,” declares Umashanker Periodi. Because, unlike gods, Bhootas talk to them.”

Periodi, who hails from a family that is involved in Bhoota Kola, is a seasoned mentor and former Head of Karnataka State at Azim Premji Foundation. Although he grew up in a Dakshina Kannada village enveloped by the aura of rituals and traditions, as a college student with socialist influences, he grew sceptical of them. As his worldview matured, nudged by his mother, Periodi began to acknowledge and respect the beliefs of his people. His experience shaped his tolerance and appreciation of their cultural and social significance.

In the second episode of our Kannada series Noorakke Nooru Karnataka [100/100 Karnataka], Shraddha has an engaging conversation with Periodi on the rich tradition of Bhoota Kola. 

A spirit worship tradition with highly stylised elements of performance and music, Bhoota Kola thrives in the Dakshina Kannada region of coastal Karnataka known as Tulunadu. The ceremonies, which take place between December and July, involve elaborate preparations, including energetic performances characterised by intricate costumes and decorations. 

Periodi explains that Bhootas — ancestral spirits — are often a symbolic manifestation of entities or powers feared or revered by communities that worship them. There is Koragajja the wise tribal elder who can recover anything that is lost, Panjurli the fearsome boar-faced forest spirit who is the protector of crops, the spirits of the heroic twins Koti and Chennayya who were martyred as they combated social injustice, and so on.

Rooted in indigenous practices and Hindu mythology, Bhoota Kola is performed by shamanistic dancers who invoke ancestral spirits and become possessed by them, entering a lucid trance-like state. In this state, the Bhoota is often approached for answers, advice, or mediation. When the verdict is delivered, the spirit’s word is law.

I’m here, you have no reason to fear.” The Bhoota’s blessing is a solace to the village community. 

Bhootas, usually personified by individuals from marginalised castes, are vital arbiters that mediate conflicts and disputes within their communities. They serve as counsellors and dispensers of justice. Often, the Bhootas deliver judgements that go against the interests of the feudal landlords. For challenging caste hierarchy, Bhootas have often paid with their lives. Yet, struggling to overcome attempts by upper castes to rein in or muzzle the tradition, Bhoota Kola has remained a vital pillar of community life in Tulunadu. 

A Bhoota Kola brings families and communities together for a night of cultural immersion, creates a permissive environment for women to socialise beyond established curfew hours, and provides a sacred space for free expression for those oppressed by the caste system.

Continuing our exploration of stories from Karnataka for you to savour and share, Radio Azim Premji University brings you yet another episode of Noorakke Nooru Karnataka. We hope you enjoy listening to it. 

Credits:

Akshay Ramuhalli, Bijoy Venugopal, Bruce Lee Mani, Harshit Hillol Gogoi, Manjunath SV, Narayan Krishnaswamy, Prashant Vasudevan, Sananda Dasgupta, Seema Seth, Shraddha Gautam, Supriya Joshi, and Velu Shankar

Translated by Kannada Initiative Team, Azim Premji University

ದಕ್ಷಿಣ ಕನ್ನಡದ ಜನರಿಗೆ, ಭೂತಗಳು ದೇವರಿಗಿಂತ ಹೆಚ್ಚು” ಎಂದು ಉಮಾಶಂಕರ್ ಪೆರಿಯೋಡಿ ಅವರು ಹೇಳುತ್ತಾರೆ.

ನಮ್ಮ ಕನ್ನಡ ಸರಣಿಯ ನೂರಕ್ಕೆ ನೂರು ಕರ್ನಾಟಕ ಕಾರ್ಯಕ್ರಮದ (100÷100 ಕರ್ನಾಟಕ) ಎರಡನೇ ಸಂಚಿಕೆಯಲ್ಲಿ, ಶ್ರದ್ಧಾ ಅವರು ಭೂತ ಕೋಲದ ಶ್ರೀಮಂತ ಸಂಪ್ರದಾಯದ ಕುರಿತು ಪೆರಿಯೋಡಿಯವರೊಂದಿಗೆ ಮಾತನಾಡಿದ್ದಾರೆ.

ಭೂತ ಕೋಲದಲ್ಲಿ ಒಳಗೊಂಡಿರುವ ಕುಟುಂಬದಿಂದ ಬಂದಿರುವ ಪೆರಿಯೋಡಿ ಅವರು ಅನುಭವಿ ಮಾರ್ಗದರ್ಶಕರು ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಲ್ಲಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಸ್ಥರು. ಅವರು ಭೂತ ಕೋಲದ ಪ್ರಭೆಯಿಂದ ಆವೃತವಾಗಿದ್ದ ವಾತಾವರಣದಲ್ಲಿ ಬೆಳೆದಿದ್ದೇನೋ ನಿಜ. ಆದರೆ ಸಮಾಜವಾದಿ ಪ್ರಭಾವದ ಕಾರಣ ಕಾಲೇಜು ದಿನಗಳಲ್ಲಿ ಅದರ ಬಗ್ಗೆ ಸಂಶಯ ಬೆಳೆಸಿಕೊಂಡರು. ಪ್ರಬುದ್ಧತೆಯನ್ನು ಗಳಿಸಿಕೊಂಡಂತೆ ತನ್ನ ತಾಯಿಯ ಉತ್ತೇಜನದೊಂದಿಗೆ ಪೆರಿಯೋಡಿ ಅವರು ತನ್ನ ಜನರ ನಂಬಿಕೆಗಳನ್ನು ಒಪ್ಪಿಕೊಳ್ಳಲು ಮತ್ತು ಗೌರವಿಸಲು ಪ್ರಾರಂಭಿಸಿದರು. ಜತೆಗೆ ಅವರ ಅನುಭವವು, ಭೂತ ಕೋಲದ ಸಾಂಸ್ಕೃತಿಕ ಮತ್ತು ಸಾಮಾಜಿಕ ಮಹತ್ವದ ಬಗ್ಗೆ ಹೆಚ್ಚಿನ ಸಹಿಷ್ಣುತೆಯನ್ನು ಮೈಗೂಡಿಸಿಕೊಳ್ಳಲು ಸಹಕರಿಸಿತು.

ಭೂತ ಕೋಲವು ತುಳುನಾಡು ಎಂದು ಕರೆಯಲ್ಪಡುವ ಕರ್ನಾಟಕದ ದಕ್ಷಿಣ ಕನ್ನಡ ಪ್ರದೇಶದಲ್ಲಿ ಪ್ರವರ್ಧಮಾನಕ್ಕೆ ಬಂದ ಆರಾಧನೆಯಾಗಿದೆ. ಪ್ರದರ್ಶನ ಮತ್ತು ಸಂಗೀತದ ಅತ್ಯಂತ ಶೈಲೀಕೃತ ಅಂಶಗಳನ್ನು ಹೊಂದಿರುವ ಸಂಪ್ರದಾಯ ಇದಾಗಿದೆ. ಡಿಸೆಂಬರ್ ಮತ್ತು ಜುಲೈ ನಡುವೆ ನಡೆಯುವ ಈ ಸಮಾರಂಭಗಳು ಸಂಕೀರ್ಣವಾದ ವೇಷಭೂಷಣಗಳು ಮತ್ತು ಅಲಂಕಾರಗಳಿಂದ ಗುರುತಿಸಲ್ಪಡುತ್ತವೆ. ಈ ಆರಾಧನೆಯು ರೋಮಾಂಚಕ ಮೆರವಣಿಗೆಗಳು ಮತ್ತು ಪ್ರದರ್ಶನಗಳನ್ನು ಒಳಗೊಂಡಂತೆ ವಿಸ್ತಾರವಾದ ಸಿದ್ಧತೆಗಳನ್ನು ಒಳಗೊಂಡಿರುತ್ತವೆ. 

ಪೂರ್ವಜರ ಆತ್ಮಗಳಾದ ಭೂತಗಳು, ಅವುಗಳನ್ನು ಪೂಜಿಸುವ ಸಮುದಾಯಗಳು ಭಯಪಡುವ ಅಥವಾ ಗೌರವಿಸುವ ವ್ಯಕ್ತಿಗಳು ಅಥವಾ ಶಕ್ತಿಗಳ ಸಾಂಕೇತಿಕ ಅಭಿವ್ಯಕ್ತಿ ಎಂದು ಪೆರಿಯೋಡಿ ವಿವರಿಸುತ್ತಾರೆ. ಈ ಚೇತನಗಳಲ್ಲಿ, ಏನೇ ಕಳೆದು ಹೋದರೂ ಹುಡುಕಿ ಕೊಡುವ, ಗ್ರಾಮದ ಹಿರಿಯನಾದ ಕೊರಗಜ್ಜ, ಅರಣ್ಯದ ಚೇತನ ಹಾಗೂ ಬೆಳೆಯನ್ನು ರಕ್ಷಿಸುವ ಹಂದಿಯ ಮುಖದ ಪಂಜುರ್ಲಿ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಅವಳಿ ವೀರರಾದ ಕೋಟಿ ಮತ್ತು ಚೆನ್ನಯ ಇತ್ಯಾದಿಗಳನ್ನು ಇಲ್ಲಿ ಕಾಣಬಹುದು. 

ಸ್ಥಳೀಯ ಆಚರಣೆಗಳು ಮತ್ತು ಹಿಂದೂ ಪುರಾಣಗಳಲ್ಲಿ ಬೇರೂರಿರುವ ಭೂತ ಕೋಲವನ್ನು ಭೂತ ನರ್ತಕರು ಪ್ರದರ್ಶಿಸುತ್ತಾರೆ. ಅವರು ಪೂರ್ವಜರ ಆತ್ಮಗಳನ್ನು ಆಹ್ವಾನಿಸುತ್ತಾರೆ. ಈ ಹಂತದಲ್ಲಿ ಭೂತವು ಅವರನ್ನು ಆವಾಹಿಸುತ್ತದೆ. ಆಗ ಅವರು ಸಮ್ಮೋಹನ ಸ್ಥಿತಿಗೆ ತಲುಪುತ್ತಾರೆ. ಈ ವೇಳೆಯಲ್ಲಿ ಹೆಚ್ಚಾಗಿ ಉತ್ತರ, ಸಲಹೆ ಅಥವಾ ಮಧ್ಯಸ್ಥಿಕೆಗಾಗಿ ಭೂತದ ಮೊರೆ ಹೋಗಲಾಗುತ್ತದೆ. ಭೂತವು ತೀರ್ಪನ್ನು ನೀಡಿದಾಗ ಅದರ ಮಾತೇ ಇಲ್ಲಿ ಕಾನೂನು ಎನಿಸುತ್ತದೆ.

ಇಲ್ಲಿ ನಾನಿದ್ದೇನೆ. ನೀವು ಯಾವುದೇ ಕಾರಣಕ್ಕೆ ಭಯಪಡುವ ಅಗತ್ಯವಿಲ್ಲ” ಎಂದು ಹೇಳುವ ಭೂತದ ಅಭಯವು ಗ್ರಾಮದ ಇಡೀ ಸಮುದಾಯಕ್ಕೆ ಸಾಂತ್ವನವನ್ನು ನೀಡುತ್ತದೆ.

ಸಾಮಾನ್ಯವಾಗಿ ಸಮಾಜದ ಕೆಳ ಜಾತಿಗಳ ಜನರಲ್ಲಿ ಆವಾಹನೆಯಾಗುವ ಭೂತಗಳು ಸಮುದಾಯಗಳೊಳಗಿನ ವಿವಿಧ ಘರ್ಷಣೆಗಳಲ್ಲಿ ಮಧ್ಯಸ್ಥಿಕೆ ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಆಪ್ತ ಸಲಹೆಗಾರರಾಗಿ ಮಾತ್ರವಲ್ಲದೆ ನ್ಯಾಯವನ್ನು ಒದಗಿಸುವಲ್ಲಿಯೂ ತಮ್ಮ ಪಾತ್ರವನ್ನು ವಹಿಸುತ್ತವೆ. ಕೆಲವೊಮ್ಮೆ ಭೂತಗಳು ಊಳಿಗಮಾನ್ಯ ದೊರೆಗಳ ಹಿತಾಸಕ್ತಿಗೆ ವಿರುದ್ಧವಾಗಿ ನ್ಯಾಯ ನೀಡಿದ್ದೂ ಇದೆ.

ಸಂಪ್ರದಾಯವನ್ನು ನಿಯಂತ್ರಿಸಲು ಮೇಲ್ಜಾತಿಗಳು ನಿರಂತರವಾಗಿ ನಡೆಸುವ ಪ್ರಯತ್ನಗಳನ್ನು ಮೀರಿ ಭೂತ ಕೋಲವು ತುಳುನಾಡಿನ ಸಮುದಾಯದ ಬದುಕಿನ ಅವಿಭಾಜ್ಯ ಅಂಗವಾಗಿ ಉಳಿದಿದೆ. ಒಂದು ಕಾಲದಲ್ಲಿ ಜಾತಿ ಪದ್ಧತಿಗೆ ಸವಾಲೆಸೆದಿದ್ದ ಭೂತಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡದ್ದೂ ಇದೆ. ಏನೇ ಆಗಲಿ, ಭೂತ ಕೋಲವು ತುಳುನಾಡಿನಲ್ಲಿ ತನ್ನ ನೆಲೆಯನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಭೂತವು ಕುಟುಂಬಗಳು ಮತ್ತು ಕುಲಗಳನ್ನು ಒಟ್ಟುಗೂಡಿಸುತ್ತದೆ ಮಾತ್ರವಲ್ಲದೆ ಆಧ್ಯಾತ್ಮಿಕ ಅಭಿವ್ಯಕ್ತಿಗೆ ಪವಿತ್ರ ನೆಲೆಯನ್ನು ಒದಗಿಸುತ್ತದೆ.

ಕರ್ನಾಟಕದ ಕಥೆಗಳ ನಮ್ಮ ಅನ್ವೇಷಣೆಯನ್ನು ಮುಂದುವರೆಸುತ್ತಾ, ರೇಡಿಯೋ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ನೂರಕ್ಕೆ ನೂರು ಕರ್ನಾಟಕದ ಮತ್ತೊಂದು ಸಂಚಿಕೆಯನ್ನು ನಿಮಗಾಗಿ ಅರ್ಪಿಸುತ್ತಿದೆ. ನೀವು ಇದನ್ನು ಕೇಳುವುದನ್ನು ಆನಂದಿಸುತ್ತೀರಿ ಎಂದು ನಾವು ಭಾವಿಸುತ್ತೇವೆ.

ಕೃತಜ್ಞತೆಗಳು:

ಅಕ್ಷಯ್ ರಾಮುಹಳ್ಳಿ, ಬಿಜೋಯ್ ವೇಣುಗೋಪಾಲ್, ಬ್ರೂಸ್ ಲೀ ಮಣಿ, ಹರ್ಷಿತ್ ಹಿಲ್ಲೋಲ್ ಗೊಗೋಯ್, ಮಂಜುನಾಥ್ ಎಸ್ ವಿ, ನಾರಾಯಣ ಕೃಷ್ಣಸ್ವಾಮಿ, ಪ್ರಶಾಂತ್ ವಾಸುದೇವನ್, ಸಾನಂದ ದಾಸ್‌ಗುಪ್ತ, ಸೀಮಾ ಸೇಠ್, ಶ್ರದ್ಧಾ ಗೌತಮ್, ಸುಪ್ರಿಯಾ ಜೋಶಿ, ಮತ್ತು ವೇಲು ಶಂಕರ್

ಈ ಲೇಖನವನ್ನು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕನ್ನಡ ಉಪಕ್ರಮ ತಂಡ ಅನುವಾದಿಸಿದೆ

Acknowledgements

  • YouTube: PANJURLI KOLA — NUDI #FOLK
  • YouTube: Pili Chamundi Nema | ಪಿಲಿ ಚಾಮುಂಡಿ ನೇಮ
  • YouTube: ಕೋಟಿ ಚೆನ್ನಯ್ಯರ್ ಗರಡಿ ಜಪ್ಪುನ ಪೊರ್ಲು,ಅನಂತಾಡಿ ಬಾಕಿಲ ಗುತ್ತು|| Koti Chennaya Nema ananthadi ‑bakilaguttu||
  • YouTube: Koragajjana Kola Talapady 

Resources for further reading and exploration

Journal Articles and Research Papers

Feature Articles

You may also enjoy these shows