ಶೈಕ್ಷಣಿಕ ನೀತಿ ನಿರೂಪಣೆ ಮತ್ತು ಆಡಳಿತ

ಶೈಕ್ಷಣಿಕ ನೀತಿ ನಿರೂಪಣೆ ಮತ್ತು ಆಡಳಿತದ ಬಗ್ಗೆ ಎಸ್‌. ವಿ. ಮಂಜುನಾಥ್‌ಮತ್ತು ಬಿ. ಆರ್‌. ಮಂಜುನಾಥ್‌ಅವರೊಂದಿಗೆ ಎಚ್‌. ಪಾಂಡುರಂಗ ವಿಠಲರವರು ಸಂವಾದ ನಡೆಸಲಿದ್ದಾರೆ.

Kannada Webinar 26 Sept 2023 LN

ಎಸ್‌. ವಿ. ಮಂಜುನಾಥ್‌ರವರ ಕಲಿವ ಶಾಲೆಯ ಹಲವು ಮುಖಗಳು – ಶಾಲೆ-ಶಿಕ್ಷಣವ್ಯವಸ್ಥೆಗಳ ಒಂದು ಅನುಭವ ಕಥನ’ ಶೈಕ್ಷಣಿಕ ಕ್ಷೇತ್ರದ ಹಲವು ಮಗ್ಗುಲುಗಳನ್ನು ಸ್ಪರ್ಶಿಸುವ ಕೃತಿ. ಒಂದು ದಶಕಕ್ಕೂ ಹೆಚ್ಚಿನ ಕಾಲ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಪರಿಣಾಮವಾಗಿ ಈ ಕ್ಷೇತ್ರದ ವಿವಿಧ ಮಜಲುಗಳನ್ನು ಹತ್ತಿರದಿಂದ ನೋಡಿದ ಲೇಖಕರ ಅನುಭವದಿಂದ ರೂಪುತೆಳದ ಈ ಕೃತಿಯು, ಹಲವಾರು ಒಳನೋಟಗಳನ್ನು ಪೂರಕ ಪುರಾವೆಗಳೊಂದಿಗೆ ವಿಶ್ಲೇಷಣೆಗೆ ಒಳಪಡಿಸುತ್ತದೆ. 

ಮೂವತ್ತಾರು ಲೇಖನಗಳನ್ನು ನಾಲ್ಕು ವಿಶಾಲ ವಿಭಾಗದಲ್ಲಿ ಅಂದರೆ, ಶಾಲೆ- ವಿದ್ಯಾರ್ಥಿ- ಕಲಿಕೆ; ಶೈಕ್ಷಣಿಕ ನೀತಿ ಮತ್ತು ಆಡಳಿತ; ಶಿಕ್ಷಕರ ಶಿಕ್ಷಣ ಮತ್ತು ಶೈಕ್ಷಣಿಕ ಅನುವಾದಗಳೆಂದು ವರ್ಗೀಕರಿಸಿ ಪುಸ್ತಕದಲ್ಲಿ ಅಡಕಗೊಳಿಸಲಾಗಿದೆ. ಇಲ್ಲಿನ ಲೇಖನಗಳು ಲೇಖಕರ ಶಾಲಾ ದಿನದ ಅನುಭವದಿಂದ ಆರಂಭಿಸಿ, ಮಕ್ಕಳ ಹಿನ್ನಲೆ, ಅವಕಾಶ ವಂಚಿತ ಮಕ್ಕಳು, ಶಾಲೆಯಲ್ಲಿ ದೈಹಿಕ ಶಿಕ್ಷೆ ಮತ್ತು ಶಿಕ್ಷಣ, ಶಿವರಾಮ ಕಾರಂತ ಮತ್ತು ಪೂರ್ಣಚಂದ್ರ ತೇಜಸ್ವಿಯವರಂತಹ ಸಾಹಿತಿಗಳ ಶೈಕ್ಷಣಿಕ ವಿಚಾರಗಳು, ಶಿಕ್ಷಕರ ಶಿಕ್ಷಣ ಮತ್ತು ವೃತ್ತಿಪರತೆ, ಶಿಕ್ಷಣದ ನೀತಿಗಳು, ದೇಶ ವಿದೇಶಗಳ ಶೈಕ್ಷಣಿಕ ವ್ಯವಸ್ಥೆಯ ಸ್ವರೂಪಗಳು ಮತ್ತು ಶೈಕ್ಷಣಿಕ ಅನುವಾದವು ಸೇರಿದಂತೆ ಹಲವು ವಿಷಯಗಳನ್ನು ತನ್ನ ವ್ಯಾಪ್ತಿಯಲ್ಲಿ ಇಟ್ಟುಕೊಂಡಿದೆ. 

ಲೇಖಕರಿಗೆ ಈ ಕ್ಷೇತ್ರದ ಮೇಲಿರುವ ಕಾಳಜಿ ಮತ್ತು ವಸ್ತುನಿಷ್ಠ ವಿಶ್ಲೇಷಣೆಗಳು ಈ ಪುಸ್ತಕದ ಹಲವು ಲೇಖನಗಳನ್ನು ಒಟ್ಟುಗೊಡಿಸಿ, ಪ್ರತಿ ಲೇಖನಕ್ಕೂ ಇನ್ನೊಂದರೊಂದಿಗೆ ಜೈವಿಕ ಸಂಬಂಧವನ್ನು ಎರ್ಪಡಿಸಿವೆ.

ಚರ್ಚೆಯು ಕನ್ನಡದಲ್ಲಿಯೇ ನಡೆಯುತ್ತದೆ.

ಲೇಖನವನ್ನು ಓದಲು ಈ ಲಿಂಕ್ https://​anu​vadasam​pa​da​.azim​premji​u​ni​ver​si​ty​.edu​.in/​3786/ ನ್ನು ಬಳಸಿ.

ವೆಬಿನಾರ್ ಸೇರ್ಪಡೆಗೆ ಇಲ್ಲಿ ಕ್ಲಿಕ್ ಮಾಡಿ — 

ಸಂಪನ್ಮೂಲ ವ್ಯಕ್ತಿಗಳ ಬಗ್ಗೆ:

ಎಸ್‌. ವಿ. ಮಂಜುನಾಥ್‌ರವರು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿಯ ಅನುವಾದ ಉಪಕ್ರಮದ ಕನ್ನಡ ಅನುವಾದದ ನೇತೃತ್ವ ವಹಿಸಿದ್ದಾರೆ. ಇವರು ಕಳೆದ 14 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಬಹಳ ಹತ್ತಿರದಿಂದ ನೋಡಿದ್ದಾರೆ. 

ಮಂಜುನಾಥ್‌ರವರು ರಚಿಸಿರುವ ಕಲಿವ ಶಾಲೆಯ ಹಲವು ಮುಖಗಳು’ ಪುಸ್ತಕವು, ಶಿಕ್ಷಣ ಕ್ಷೇತ್ರದೊಂದಿಗಿನ ಅವರ ಸುದೀರ್ಘ ಒಡನಾಟಕ್ಕೆ ಹಿಡಿದ ಕನ್ನಡಿಯಾಗಿದೆ.

ಬಿ. ಆರ್‌. ಮಂಜುನಾಥ್‌ರವರು ಬರಹಗಾರರು ಮತ್ತು ಅನುವಾದಕರು. ಶೈಕ್ಷಣಿಕ ವಿಷಯಗಳ ಕುರಿತು ಮತ್ತು ವಿದ್ಯಾರ್ಥಿ — ಯುವಜನ ಚಳುವಳಿಯಲ್ಲಿ ಮೂರು ದಶಕಗಳ ಕಾಲ ಕೆಲಸ ಮಾಡಿದ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ ಅನುಭವವಿದೆ. ಅನೇಕ ಬೀದಿ ನಾಟಕಗಳನ್ನು ಬರೆದು ಆಡಿಸಿದ್ದಾರೆ.

ಎಚ್‌. ಪಾಂಡುರಂಗ ವಿಠಲರವರು ಬ್ಯಾಂಕಿಂಗ್‌ಕ್ಷೇತ್ರದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಸಿ ನಂತರ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪಿಎಚ್.ಡಿ, ಪಡೆದಿರುವ ಇವರು, ಹಲವು ವರ್ಷಗಳ ಕಾಲ ಉಪನ್ಯಾಸಕರಾಗಿ ಮತ್ತು ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾರೆ. ಈಗ, ಮೈಸೂರಿನ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಯ ಸಮುದಾಯ ರೇಡಿಯೋ ಕೇಂದ್ರದ ಮುಖ್ಯಸ್ಥರೂ, ಶೈಕ್ಷಣಿಕ ಸಲಹೆಗಾರರೂ ಆಗಿದ್ದಾರೆ.

ಅನುವಾದ ಸಂಪದ