ವೆಬಿನಾರ್ ಶೀರ್ಷಿಕೆ: ತ್ರಿಭುಜಗಳೊಂದಿಗೆ ಪ್ರಯೋಗಗಳು
‘ತ್ರಿಭುಜಗಳೊಂದಿಗೆ ಪ್ರಯೋಗಗಳು’ ಲೇಖನದ ಸುತ್ತ ಎಸ್. ವಿಜಯ್ಕುಮಾರ್ಮತ್ತು ಎಂ. ಆರ್. ಮಲ್ಲಿಕಾರ್ಜುನ ಇವರೊಂದಿಗೆ ಮಧುಕರ ಪುಟ್ಟಿ ಸಂವಾದ ನಡೆಸಲಿದ್ದಾರೆ

ಗಣಿತದ ಪರಿಕಲ್ಪನೆಗಳನ್ನು ಬೋಧಿಸುವಾಗ, ಗಣಿತದ ತಾರ್ಕಿಕ ಭಾಗವನ್ನು ಮಕ್ಕಳು ಕಲಿಯದಿರುವ ಸಾಧ್ಯತೆ ಇರುತ್ತದೆ.
ಆದರೆ, ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಪಿಸಿ ಮಕ್ಕಳನ್ನು ಯೋಚನೆಗೆ ಹಚ್ಚುವ ಪ್ರಶ್ನೆಗಳ ಮೂಲಕ ತೊಡಗಿಸಿದಾಗ ಗಣಿತದ ತಾರ್ಕಿಕ ಅಂಶಗಳನ್ನು ಕಲಿಯುವಂತೆ ಮಾಡಬಹುದು ಎಂಬುದಕ್ಕೆ ವಿನಯ್ನಾಯರ್ರವರ ಲೇಖನ ‘ತ್ರಿಭುಜಗಳೊಂದಿಗೆ ಪ್ರಯೋಗಗಳು’ ಒಂದು ನಿದರ್ಶನವಾಗಿದೆ.
ಲೇಖನವನ್ನು ಓದಲು ಈ ಲಿಂಕ್ https://bit.ly/3YBlYvn ನ್ನು ಬಳಸಿ.
ಈ ಸಂವಾದದಲ್ಲಿ ಎಸ್. ವಿಜಯ್ಕುಮಾರ್, ಸಂಪನ್ಮೂಲ ವ್ಯಕ್ತಿ, ಅಜೀಂ ಪ್ರೇಮ್ಜಿ ಫೌಂಡೇಷನ್ಮತ್ತು ಎಂ. ಆರ್. ಮಲ್ಲಿಕಾರ್ಜುನ, ಗಣಿತ ಮತ್ತು ವಿಜ್ಞಾನ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊಡತಿ, ಮತ್ತು ಮಧುಕರ ಪುಟ್ಟಿ, ಸದಸ್ಯರು, ಅಜೀಂ ಪ್ರೇಮ್ಜಿ ಯೂನಿವರ್ಸಿಟಿ, ಬೆಂಗಳೂರು, ಭಾಗವಹಿಸಲಿದ್ದಾರೆ.
ಅನುವಾದ ಸಂಪದ ಇಂಗ್ಲಿಷ್ನಿಂದ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ, ವಿನೂತನವಾದ ಶೈಕ್ಷಣಿಕ ಸಂಪನ್ಮೂಲಗಳ ಆನ್ಲೈನ್ ಕಣಜ. ಸದ್ಯದಲ್ಲಿ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ 2000ಕ್ಕೂ ಹೆಚ್ಚು ಶೈಕ್ಷಣಿಕ ಸಂಪನ್ಮೂಲಗಳು ಲಭ್ಯವಿದ್ದು, ಇದರ ಪ್ರಮಾಣವನ್ನು ಹೆಚ್ಚಿಸಲಾಗುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣಾಸಕ್ತರು ಮುಕ್ತವಾಗಿ ಬಳಸಿಕೊಳ್ಳಬಹುದಾಗಿದೆ.