ಭಾಷಾ ಬೋಧನೆಯಲ್ಲಿ ಪೂರ್ವಗ್ರಹಗಳ ನಿವಾರಣೆ

ಈ ವಿಷಯದ ಬಗ್ಗೆ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಎಚ್‌. ಎನ್‌. ಮುರಳೀಧರ ಅವರೊಂದಿಗೆ ಜಿ. ವಿ. ನಾಗಾನಂದ ಸಂವಾದ ನಡೆಸುತ್ತಾರೆ.

Kannada Webinar 23 May 2023 SM

ಮಕ್ಕಳ ಬೌದ್ಧಿಕ ಬೆಳವಣಿಗೆಯಲ್ಲಿ ಭಾಷಾ ಕಲಿಕೆಯ ಪಾತ್ರ ಮಹತ್ವವಾದದ್ದು. ಆದ್ದರಿಂದ ಭಾಷೆ ಕಲಿಸುವ ಶಿಕ್ಷಕರಿಗೆ ಭಾಷೆಯ ಸ್ವರೂಪ, ಸಂರಚನೆ, ಬಹುಭಾಷಿಕತೆ ಹಾಗೂ ಉಪಭಾಷೆಗಳ ವಿಷಯವಾಗಿ ತಿಳುವಳಿಕೆ ಅಗತ್ಯವಾಗಿ ಇರಬೇಕಾಗುತ್ತದೆ. ಈ ತಿಳುವಳಿಕೆಯು ಭಾಷಾ ತರಗತಿ ಪ್ರಕ್ರಿಯೆಯಲ್ಲಿ ಭಾಷೆಯನ್ನು ಭಾಷೆಯೇತರ ಅಂಶಗಳಾದ ಅಧಿಕಾರ, ರಾಜಕೀಯ ಅಂಶಗಳಿಂದ ಪ್ರತ್ಯೇಕಿಸಿ ಭಾಷೆಯನ್ನು ಜ್ಞಾನ ಮತ್ತು ಕೌಶಲ್ಯದ ಸಾಧನವಾಗಿ ಹೇಗೆ ಬೋಧಿಸಬಹುದು ಎಂಬುದನ್ನು ಮನಗಾಣಿಸುತ್ತದೆ. 

ಈ ಆಯಾಮದಲ್ಲಿ ಪ್ರಸ್ತುತ ಲೇಖನವು ಮಾತೃಭಾಷೆ ಮತ್ತು ಬಹುಭಾಷಿಕತೆಯನ್ನು ತರಗತಿಯ ಸಂಪನ್ಮೂಲವಾಗಿ ಪರಿಗಣಿಸುವ ಸಾಧ್ಯತೆಯನ್ನು ಸಾದರಪಡಿಸುತ್ತದೆ.

ಲೇಖನವನ್ನು ಓದಲು: https://​bit​.ly/​3​B​xPGrb

ವೆಬಿನಾರ್‌ನ ವಿವರಗಳನ್ನು ಪಡೆಯಲು ಇಲ್ಲಿ ನೋಂದಾಯಿಸಿಕೊಳ್ಳಿ : https://​bit​.ly/​3​Z​zwH9S

ವೆಬಿನಾರ್ ಸೇರ್ಪಡೆಗೆ ಇಲ್ಲಿ ಕ್ಲಿಕ್ ಮಾಡಿ.

ಮಾತನಾಡುವವರ ಬಗ್ಗೆ

ಎಚ್‌. ಎನ್‌. ಮುರಳೀಧರ ಅವರು ಬೆಂಗಳೂರಿನ ಎಪಿಎಸ್‌ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಕ್ತಿ ಸಾಹಿತ್ಯ ಮತ್ತು ಭಾಷಾ ವಿಜ್ಞಾನದಲ್ಲಿ ವಿಶೇಷ ಪರಿಣಿತಿ ಹೊಂದಿರುವ ಇವರು, ದಾಸ ಸಾಹಿತ್ಯ ಮತ್ತು ವಚನಗಳ ಕುರಿತಾಗಿ ಸಾಕಷ್ಟು ಅಧ್ಯಯನ ನಡೆಸಿದ್ದಾರೆ. ಇವರ ಕೃತಿಗಳಲ್ಲಿ ಮುಖ್ಯವಾದವು ತಂಬೂರಿ ಮೀಟಿದವ’, ಸುಳಿವ ಜಂಗಮ’ ಮತ್ತು ಅನಿಯಮ’. ಶಿಕ್ಷಣ ಕ್ಷೇತ್ರದಲ್ಲಿಯೂ ಇವರು ಸಕ್ರಿಯವಾಗಿದ್ದು, ಪರಿಸರದ ಭಾಷೆಯಲ್ಲಿ ಶಿಕ್ಷಣ ಮತ್ತು ಶಿಕ್ಷಣದ ಮಾನವೀಕರಣಗಳ ಅಗತ್ಯತೆಯ ಪ್ರತಿಪಾದಕರಾಗಿದ್ದಾರೆ.

ಜಿ. ವಿ. ನಾಗಾನಂದ ಒಂಬತ್ತು ವರ್ಷಗಳಿಂದ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಭಾಷಾ ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದಾರೆ.

ಅನುವಾದ ಸಂಪದ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಇರುವ ಶೈಕ್ಷಣಿಕ ಸಂಪನ್ಮೂಲಗಳ ಆಕರ. ಇದರ ಬಗ್ಗೆ ಇನ್ನಷ್ಟು ತಿಳಿಯಲು 

ಇಲ್ಲಿ ಕ್ಲಿಕ್ ಮಾಡಿ →